HomeAutomobileಬಹು ನಿರೀಕ್ಷಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ : ಸೆಪ್ಟೆಂಬರಿನಿಂದ ಗ್ರಾಹಕರಿಗೆ ಲಭ್ಯ

ಬಹು ನಿರೀಕ್ಷಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ : ಸೆಪ್ಟೆಂಬರಿನಿಂದ ಗ್ರಾಹಕರಿಗೆ ಲಭ್ಯ

ಇದು ಎಲೆಕ್ಟ್ರಿಕ್ ವಾಹನಗಳ ಯುಗ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್ ಹಾಗು ಕಾರುಗಳು ಲಗ್ಗೆಯಿಟ್ಟಿವೆ. ಇದೀಗ ಓಲಾ ಕಂಪನಿಯು ಹಲವು ವಿಶೇಷತೆಗಳೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೊರ ತಂದಿದ್ದು ಇಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಎಸ್ 1 ಮತ್ತು ಎಸ್ 1 ಪ್ರೊ ಎಂಬ ಎರಡು ರೂಪಾಂತರಗಳಲ್ಲಿ(ಮಾಡೆಲ್) ಈ ಸ್ಕೂಟರ್ ಲಭ್ಯವಾಗಲಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ 500 ಎಕರೆ ವಿಸ್ತೀರ್ಣದಲ್ಲಿ ಹೊಸದಾಗಿ ನಿರ್ಮಿಸಲಾದ ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿದ್ದು ಮುಂದಿನ ತಿಂಗಳು (ಸೆಪ್ಟೆಂಬರ್) ಗ್ರಾಹಕರ ಕೈ ಸೇರಲಿದೆ. ಓಲಾ ಕಂಪನಿ ಈಗಾಗಲೇ ರಿಫಂಡ್ ಮಾಡಬಹುದಾದ ಅಡ್ವಾನ್ಸ್ ಮೊತ್ತ ರೂ 499ಕ್ಕೆ ವಾಹನದ ಬುಕಿಂಗ್ ಅನ್ನು ತೆರೆದಿದೆ.

ಓಲಾ ಎಸ್ 1 ಮಾಡೆಲ್ ಎಕ್ಸ್ ಷೋ ರೂಮ್ ಬೆಲೆ 99,999 ಇರಲಿದೆ. ಎಸ್ 1 ನಾರ್ಮಲ್ ಹಾಗು ಸ್ಪೋರ್ಟ್ಸ್ ರೈಡಿಂಗ್ ಮೋಡ್ ಹೊಂದಿರಲಿದ್ದು ಗಂಟೆಗೆ 90 ಕಿಮೀ ವೇಗ ಸಾಮರ್ಥ್ಯ ಹೊಂದಿದೆ. 8.5 ಪೀಕ್ ಪವರ್ ಸಾಮರ್ಥ್ಯದೊಂದಿಗೆ 3.6 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿಮೀ ವೇಗ ಪಡೆದುಕೊಳ್ಳುವ ಎಸ್ 1 ಓಲಾ ಸ್ಕೂಟರ್ ಒಂದು ಚಾರ್ಜ್ ನಲ್ಲಿ ಗರಿಷ್ಟ 121 ಕಿಮೀ ದೂರ ಕ್ರಮಿಸಬಲ್ಲದು.

ಎಸ್ 1 ಪ್ರೊ ಮಾಡೆಲ್ ಎಕ್ಸ್ ಷೋ ರೂಮ್ ಬೆಲೆ 1,29,999 ಇರಲಿದ್ದು, ನಾರ್ಮಲ್, ಸ್ಪೋರ್ಟ್ಸ್ ಹಾಗು ಹೈಪರ್ ರೈಡಿಂಗ್ ಮೋಡ್ ಹೊಂದಿರಲಿದೆ. ಈ ಮಾಡೆಲ್ ಗಂಟೆಗೆ 115 ಕಿಮೀ ಗರಿಷ್ಟ ವೇಗ ಸಾಮರ್ಥ್ಯ ಹೊಂದಿದೆ. 8.5 ಪೀಕ್ ಪವರ್ ಸಾಮರ್ಥ್ಯದೊಂದಿಗೆ 3 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿಮೀ ವೇಗ ಪಡೆದುಕೊಳ್ಳುವ ಎಸ್ 1 ಪ್ರೋ ಓಲಾ ಸ್ಕೂಟರ್ ಒಂದು ಚಾರ್ಜ್ ನಲ್ಲಿ ಗರಿಷ್ಟ 181 ಕಿಮೀ ದೂರ ಕ್ರಮಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.

ಓಲಾ ಸ್ಕೂಟರ್ ಅನ್ನು ಚಾರ್ಜಿಂಗ್ ಸ್ಟೇಶನ್‌ನಿಂದ ಚಾರ್ಜ್ ಮಾಡಿದರೆ ಸೊನ್ನೆಯಿಂದ ಸಂಪೂರ್ಣವಾಗಿ ಚಾರ್ಜ್ ಮಾಡಲು ಎರಡೂವರೆ ಗಂಟೆ ತೆಗೆದುಕೊಳ್ಳುತ್ತದೆ. ಹೈಪರ್ ಚಾರ್ಜಿಂಗ್ ಕೇಂದ್ರದಲ್ಲಿ ಇದರ ಬ್ಯಾಟರಿಗಳು ಕೇವಲ 18 ನಿಮಿಷಗಳಲ್ಲಿ 50% ವರೆಗೆ ಚಾರ್ಜ್ ಆಗುತ್ತವೆ. ಮನೆಯಲ್ಲಿ ಸಾಮಾನ್ಯ ಪ್ಲಗ್ ನಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಲು ಐದೂವರೆ ಗಂಟೆ ತೆಗೆದುಕೊಳ್ಳುತ್ತದೆ. ಚಾರ್ಜ್ ಫುಲ್ ಆದಾಗ ಮೊಬೈಲ್ ಅಪ್ಲಿಕೇಶನ್ ಅಲ್ಲಿ ಸ್ಕೂಟರ್ ಮಾಲೀಕರಿಗೆ ನೋಟಿಫಿಕೇಶನ್ ಬರುತ್ತದೆ.

ಎರಡೂ ಮಾಡೆಲ್ ಸ್ಕೂಟರ್’ಗಳು 7 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಜಿಪಿಎಸ್ ನ್ಯಾವಿಗೇಷನ್, 4 ಜಿ ಸಂಪರ್ಕ, ಯುಟ್ಯೂಬ್, ಕಾಲಿಂಗ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಜತೆಗೆ ಕೀ ರಹಿತ ಇಗ್ನಿಷನ್ ಸ್ಟಾರ್ಟ್ ಮತ್ತು ಪಾರ್ಕ್ ಮಾಡಿದ ಸ್ಕೂಟರ್ ಅನ್ನು ಕಂಡು ಹಿಡಿಯಲು ಫೈಂಡ್ ಮೈ ಸ್ಕೂಟರ್ ಫೀಚರ್ ಹೊಂದಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments