
ಜನಪ್ರಿಯ ಮೊಬೈಲ್ ತಯಾರಿಕಾ ಕಂಪನಿ ಮೊಟೊರೊಲಾ ಎಡ್ಜ್ ಸರಣಿಯಲ್ಲಿ ‘ಎಡ್ಜ್ 20’ ಮತ್ತು ಮೊಟೊರೊಲಾ ‘ಎಡ್ಜ್ 20 ಫ್ಯೂಷನ್’ ಅನ್ನು ಮಂಗಳವಾರ (ಆಗಸ್ಟ್ 17) ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಮೊಟೊರೊಲಾ ಎಡ್ಜ್ 20 ಇದೇ ತಿಂಗಳ 24ರಿಂದ ಆನ್ಲೈನ್ ಅಲ್ಲಿ ಲಭ್ಯವಾಗಲಿದೆ. ಮೊಟೊರೊಲಾ ಎಡ್ಜ್ 20 ಫ್ಯೂಷನ್ ಮೂರು ದಿನಗಳ ನಂತರ ಅಂದರೆ ಆಗಸ್ಟ್ 27 ರಿಂದ ಆನ್ಲೈನ್ ಹಗಲು ಇತರ ಮಾರಾಟ ಮಳಿಗೆಗಳಲ್ಲಿ ಲಭ್ಯವಿರಲಿದೆ.
ಮೊಟೊರೊಲಾ ಎಡ್ಜ್ 20 6.7 ಇಂಚಿನ ಫುಲ್ ಎಚ್ಡಿ ಅಮೋಲೆಡ್ ಡಿಸ್ಪ್ಲೇಯೊಂದಿಗೆ 144ಹಟ್ಜ್ ರಿಫ್ರೆಶ್ ದರ ಹೊಂದಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778 ಜಿ ಪ್ರೊಸೆಸರ್ ಜತೆಗೆ 8 ಜಿಬಿ ರಾಮ್ ಮತ್ತು 128 ಜಿಬಿ ಸ್ಟೋರೇಜ್ ಹೊಂದಿರಲಿದೆ. ಮೊಟೊರೊಲಾ ಎಡ್ಜ್ 20 ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಬರಲಿದ್ದು 108 ಎಂಪಿ 8 ಎಂಪಿ 16 ಎಂಪಿ ಕ್ಯಾಮೆರಾಗಳನ್ನು ಹೊಂದಿದೆ. ಇದರ ಸೆಲ್ಫಿ ಕ್ಯಾಮೆರಾ 32 ಎಂಪಿ ರೆಸೊಲ್ಯೂಷನ್ ಹೊಂದಿದೆ. 4000 ಎಂಎಎಚ್ ಬ್ಯಾಟರಿ ಹೊಂದಿರುವ ಎಡ್ಜ್ 20 ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ.
ಮೊಟೊರೊಲಾ ಎಡ್ಜ್ ೨೦ ಫ್ಯೂಷನ್ 6.67 ಇಂಚಿನ ಫುಲ್ ಎಚ್ಡಿ ಅಮೋಲೆಡ್ ಡಿಸ್ಪ್ಲೇಯೊಂದಿಗೆ 90 ಹಟ್ಜ್ ರಿಫ್ರೆಶ್ ದರ ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 800 ಯು ಪ್ರೊಸೆಸರ್ ಜತೆಗೆ 6 ಜಿಬಿ ರಾಮ್ ಮತ್ತು 128 ಜಿಬಿ ಸ್ಟೋರೇಜ್ ಹೊಂದಿರಲಿದೆ. 8 ಜಿಬಿ ರಾಮ್ ಮತ್ತು 128 ಜಿಬಿ ಸ್ಟೋರೇಜ್ ಮಾಡೆಲ್ ಕೂಡ ಲಭ್ಯವಿರಲಿದೆ. ಮೊಟೊರೊಲಾ ಎಡ್ಜ್ 20 ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಬರಲಿದ್ದು 108ಎಂಪಿ 8ಎಂಪಿ 2ಎಂಪಿ ಕ್ಯಾಮೆರಾಗಳನ್ನು ಹೊಂದಿದೆ. ಇದರ ಸೆಲ್ಫಿ ಕ್ಯಾಮೆರಾ 32ಎಂಪಿ ರೆಸೊಲ್ಯೂಷನ್ ಹೊಂದಿದೆ. 5000 ಎಂಎಎಚ್ ಬ್ಯಾಟರಿ ಹೊಂದಿರುವ ಎಡ್ಜ್ 20 ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ.
ಮೊಟೊರೊಲಾ ಎಡ್ಜ್ 20 ಫ್ಯೂಷನ್ ಬೆಲೆ 21,499 ರೂಪಾಯಿಗಳಿಂದ ಆರಂಭವಾಗಲಿದೆ. ಮೊಟೊರೊಲಾ ಎಡ್ಜ್ 20 ಫೋನ್ 29,999 ರೂಪಾಯಿಗಳಿಗೆ ದೊರೆಯಲಿದೆ.












































