HomeMovieಕತ್ರಿನಾ ಕೈಫ್ ಜತೆ ವಿಕ್ಕಿ ಕೌಶಲ್ ಎಂಗೇಜ್? ಸದ್ದಿಲ್ಲದೇ ನಡೆದಿದೆ ಮದುವೆ ತಯಾರಿ?

ಕತ್ರಿನಾ ಕೈಫ್ ಜತೆ ವಿಕ್ಕಿ ಕೌಶಲ್ ಎಂಗೇಜ್? ಸದ್ದಿಲ್ಲದೇ ನಡೆದಿದೆ ಮದುವೆ ತಯಾರಿ?

ಮುಂಬಯಿ : ಬಾಲಿವುಡ್ ಸುಂದರಿ ಕತ್ರಿನಾ ಕೈಫ್ ಕೊನೆಗೂ ಮದುವೆಯಾಗುವ ಸುದ್ದಿಯೊಂದು ಹೊರಬಿದ್ದಿದ್ದು ಉರಿ ಖ್ಯಾತಿಯ ನಟ ವಿಕ್ಕಿ ಕೌಶಲ್ ಜತೆ ಎಂಗೇಜ್ ಆಗುತ್ತಾರೆ ಅನ್ನುವ ಗುಲ್ಲು ಇದೆ. ಹಲವು ಸಮಾರಂಭಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿರುವ ಈ ಜೋಡಿ ಎರಡು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದೆ ಎನ್ನಲಾಗಿದೆ.

ಇವರಿಬ್ಬರು ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡದೇ ಇದ್ದರೂ, ಇವರ ನಡುವಿನ ಸಂಬಂಧಗಳ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಸಮಯಗಳಿಂದ ಗುಸು ಗುಡ್ಸು ಕೇಳಿ ಬರುತ್ತಿವೆ. ಒಂದು ಟಾಕ್ ಶೋಗಾಗಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾಗಿ ಪರಿಚಯವಾದಂದಿನಿಂದ ಇಲ್ಲಿಯವರೆಗಿನ ಎರಡು ವರ್ಷಗಳಲ್ಲಿ ಅವರಿಬ್ಬರ ನಡುವಿನ ಪ್ರೀತಿ ಗಟ್ಟಿಯಾಗಿದೆ ಎನ್ನಲಾಗಿದೆ.

ಉತ್ತರ ಭಾರತದಲ್ಲಿ ಮದುವೆಗೂ ಮುಂಚೆ ರೋಕಾ ಎನ್ನುವ ಸಮಾರಂಭವಿರುತ್ತದೆ. ಗಂಡು ಹೆಣ್ಣಿನ ಮನೆಯವರು ನಿಶ್ಚಿತಾರ್ಥಕ್ಕೂ ಮೊದಲು ಸೇರುವ ಈ ಸಮಾರಂಭ ಕತ್ರಿನ ಹಾಗು ವಿಕ್ಕಿ ಕುಟುಂಬಿಕರ ಮಧ್ಯೆ ನಡೆದಿದೆ ಅನ್ನುವ ಸುದ್ದಿ ಅದಾಗಲೇ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಬಾಲಿವುಡ್ ಖ್ಯಾತ ಛಾಯಾಗ್ರಾಹಕ ವಿರಲ್ ಭಯಾನಿ ಅವರು ಇನ್‌ಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಒಂದನ್ನು ಹಾಕಿ ಅಳಿಸಿದ್ದು ಕೂಡ ಇಅದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. “ಅವರಿಬ್ಬರು ರೋಕಾ ಸಮಾರಂಭವನ್ನು ನಡೆಸಿದ್ದಾರೆ. ಹಾಗಾಗಿ ನಿಶ್ಚಿತಾರ್ಥದ ವದಂತಿ ಇದೆ. ಅಧಿಕೃತವಾಗಿ ಸ್ವತಃ ಅವರೇ ಘೋಷಣೆ ಮಾಡುವವರೆಗೆ ಅದು ವದಂತಿಯಾಗಿ ಉಳಿಯಲಿದೆ.” ಎಂದು ಬರೆದುಕೊಂಡಿದ್ದರು.

ಒಂದು ವೇಳೆ ಅವರಿಬ್ಬರೂ ಪ್ರೀತಿಸುತ್ತಿರುವುದು ನಿಜವೇ ಆಗಿದ್ದಲ್ಲಿ ಅವರಿಬ್ಬರೂ ಆದಷ್ಟು ಬೇಗ ಮದುವೆಯಾಗಲಿ ಎನ್ನುವುದು ನಮ್ಮ ಆಶಯ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments