HomeNationalಅಫ್ಘಾನಿಸ್ತಾನಕ್ಕೆ ಎಲ್ಲಾ ರೀತಿಯ ಶಸ್ತ್ರಾಸ್ತ್ರ ಮಾರಾಟವನ್ನು ಸ್ಥಗಿತಗೊಳಿಸಿದ ಅಮೇರಿಕ

ಅಫ್ಘಾನಿಸ್ತಾನಕ್ಕೆ ಎಲ್ಲಾ ರೀತಿಯ ಶಸ್ತ್ರಾಸ್ತ್ರ ಮಾರಾಟವನ್ನು ಸ್ಥಗಿತಗೊಳಿಸಿದ ಅಮೇರಿಕ

ವಾಷಿಂಗ್ಟನ್ : ಅಮೇರಿಕ ಅಧ್ಯಕ್ಷ ಬಿಡೆನ್ ನೇತೃತ್ವದ ಆಡಳಿತವು ತಾಲಿಬಾನ್ ಆಕ್ರಮಿತ ಅಫ್ಘಾನಿಸ್ತಾನಕ್ಕೆ ಎಲ್ಲಾ ರೀತಿಯ ಶಸ್ತ್ರಾಸ್ತ್ರ ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ತಾಲಿಬಾನ್ ಅಫ್ಘಾನ್ ದೇಶದ ಮೇಲೆ ಹಿಡಿತ ಸಾಧಿಸಿದ ಮೂರು ದಿನಗಳ ನಂತರ ನಿರ್ಧಾರಕ್ಕೆ ಬರಲಾಗಿದೆ.

ವಿಶ್ವದಾದ್ಯಂತ ಅಫ್ಘಾನ್ ಕುರಿತಾದ ತನ್ನ ನಿರ್ಧಾರಕ್ಕೆ ತೀವ್ರ ಟೀಕೆಗೆ ತುತ್ತಾಗಿರುವ ಅಮೇರಿಕ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಮುಖ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿದೆ. ಅಮೇರಿಕಾದ ರಾಜಕೀಯ ಹಾಗು ಮಿಲಿಟರಿ ವ್ಯವಹಾರಗಳ ಬ್ಯೂರೋ ಅಫ್ಘಾನಿಸ್ತಾನಕ್ಕೆ ಬಾಕಿ ಇರುವ ಅಥವಾ ತಲುಪಿಸದ ಶಸ್ತ್ರಾಸ್ತ್ರ ಸಾಗಣೆಯನ್ನು ಮರು ಪರಿಶೀಲನೆಗೆ ಒಳಪಡಿಸಲು ರಕ್ಷಣಾ ಗುತ್ತಿಗೆದಾರರಿಗೆ ನೀಡಿರುವ ನೋಟೀಸಿನಲ್ಲಿ ತಿಳಿಸಿದೆ.

ತಾಲಿಬಾನ್ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಅಲ್ಲಿದ್ದ ಶಸ್ತ್ರಾಸ್ತ್ರಗಳಲ್ಲಿ ಬಹುತೇಕವುಗಳನ್ನು ವಶಪಡಿಸಿಕೊಂಡಿದೆ. ಅವುಗಳಲ್ಲಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳು, ಎ-29 ಸೂಪರ್ ಟುಕಾನೊ ದಾಳಿ ವಿಮಾನ ಮತ್ತು ಗಣಿ-ನಿರೋಧಕ ಹ್ಯೂಮೀವ್ಸ್ ಜೊತೆಗೆ ಅಮೆರಿಕಾ ನಿರ್ಮಿತ ಎಂ4 ಕಾರ್ಬೈನ್‌ಗಳು ಮತ್ತು ಎಂ16 ರೈಫಲ್‌ಗಳನ್ನು ಒಳಗೊಂಡಿದೆ.

ದಾಖಲೆಯ ಪ್ರಕಾರ 2020ರವರೆಗೆ ಅಮೆರಿಕ ಒಟ್ಟು 227 ಮಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಅಫ್ಘಾನಿಸ್ತಾನಕ್ಕೆ ಮಾರಾಟ ಮಾಡಿದೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments