
ನವದೆಹಲಿ: ಫೋರ್ಡ್ ಕಾರು ಕಂಪನಿ ತನ್ನ ಜನಪ್ರಿಯ ಫಿಗೋ ಮಾಡೆಲ್ ವರ್ಷಗಳ ಹಿಂದೆ ಸ್ಥಗಿತಗೊಳಿಸಿತ್ತು. ಈಗ ಫಿಗೊ ಹ್ಯಾಚ್ ಬ್ಯಾಕ್ ಕಾರಿನ ಆಟೋಮ್ಯಾಟಿಕ್ ಗೇರ್ ಮಾದರಿಯ ಕಾರು ಪುನಃ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈಗಾಗಲೇ ಜುಲೈ ಕೊನೆಯ ವಾರದಲ್ಲಿ ಲಾಂಚ್ ಆಗಿದ್ದು ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.
1.2 ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿರುವ ಈ ಕಾರು, 6 ಸ್ಪೀಡ್ ಆಯ್ಕೆಗಳನ್ನು ಒಳಗೊಂಡಿದೆ. 7 ಇಂಚಿನ ಟಚ್ ಸ್ಕ್ರೀನ್, ಆಟೋಮ್ಯಾಟೆಡ್ ಎಸಿ, ಎಲೆಕ್ಟ್ರಿಕಲ್ ಒಆರ್ವಿಎಂಗಳು, ಪುಶ್ ಬಟನ್ ಸ್ಟಾರ್ಟ್ ಇತ್ಯಾದಿ ಸೌಕರ್ಯಗಳನ್ನು ನೀಡಲಾಗಿದೆ. ಸೇಫ್ಟಿಗಾಗಿ 6 ಏರ್ ಬ್ಯಾಗ್ ಇರಲಿದ್ದು, ಜತೆಗೆ ಎಬಿಎಸ್-ಇಬಿಡಿ- ಇಎಸ್ಸಿ, ಟ್ರಾಕ್ಷನ್ ಕಂಟ್ರೋಲ್ಗಳಿವೆ.
ಫೋರ್ಡ್ ಫಿಗೊ ಆಟೋಮ್ಯಾಟಿಕ್ ಎಕ್ಸ್ ಶೋರೂಂ ಬೆಲೆ 7.75 ಲಕ್ಷ ರೂ.ಗಳಿಂದ ಆರಂಭವಾಗಲಿದ್ದು, 8.20 ಲಕ್ಷ ರೂವರೆಗೆ ಇದೆ.
ಫೋರ್ಡ್ ಫಿಗೊ ಆಟೋಮ್ಯಾಟಿಕ್, ಮಾರುತಿ ಸುಜುಕಿ ಸ್ವಿಫ್ಟ್ (ರೂ. 7.01 ಲಕ್ಷ ರೂ. 8.42 ಲಕ್ಷ, ಎಕ್ಸ್ ಶೋರೂಮ್) ಮತ್ತು ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ (ರೂ. 6.62 ಲಕ್ಷ ರೂ. 7.86 ಲಕ್ಷ, ಎಕ್ಸ್ ಶೋರೂಮ್) ಗಳಿಗೆ ಸ್ಪರ್ಧೆ ಕೊಡಲಿದೆ. ಸ್ವಿಫ್ಟ್ ಮತ್ತು ನಿಯೋಸ್ ಎರಡನ್ನೂ 5 ಸ್ಪೀಡ್ ಎಎಂಟಿ ಗೇರ್ಬಾಕ್ಸ್ನೊಂದಿಗೆ ನೀಡಲಾಗಿದೆ. ಫಿಗೊ ಹೆಚ್ಚು ಅತ್ಯಾಧುನಿಕವಾದಂತಹ ಟಾರ್ಕ್ ಪರಿವರ್ತಕ ಯುನಿಟ್ ಹೊಂದಿದ್ದು ತಾಂತ್ರಿಕವಾಗಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಉತ್ತಮವಾಗಿದೆ.












































