HomeNationalಈಗಿನ ಅಮೇರಿಕ ಅಧ್ಯಕ್ಷ, ಆಗಿನ ಉಪಾಧ್ಯಕ್ಷ ಜೋ ಬಿಡೆನ್ ಓರ್ವ ಅಸಮರ್ಥ ಎಂದಿದ್ದ ಒಸಾಮಾ ಬಿನ್...

ಈಗಿನ ಅಮೇರಿಕ ಅಧ್ಯಕ್ಷ, ಆಗಿನ ಉಪಾಧ್ಯಕ್ಷ ಜೋ ಬಿಡೆನ್ ಓರ್ವ ಅಸಮರ್ಥ ಎಂದಿದ್ದ ಒಸಾಮಾ ಬಿನ್ ಲಾಡೆನ್

ವಾಷಿಂಗ್ಟನ್: 2010ರಲ್ಲಿ ಅಮೇರಿಕಾದ ಉಪಾಧ್ಯಕ್ಷನಾಗಿದ್ದ ಪ್ರಸ್ತುತ ಹಾಲಿ ಅಧ್ಯಕ್ಷ ಆಗಿರುವ ಜೋ ಬಿಡೆನ್ ಒಬ್ಬ ಅಸಮರ್ಥ ಎಂದು ವಿಶ್ವ ಕಂಡ ಅತೀ ದೊಡ್ಡ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಈ ಹಿಂದೆ ಹೇಳಿರುವುದು ಈಗ ದೊಡ್ಡ ಸುದ್ದಿಯಾಗುತ್ತಿದೆ. ಬಿಡೆನ್ ಅಮೇರಿಕಾದ ಅಧ್ಯಕ್ಷ ಆಗಬೇಕು, ಆಗ ಅಮೇರಿಕ ಪತನದತ್ತ ಸಾಗುತ್ತದೆ, ಅದನ್ನು ನಾನು ನೋಡಬೇಕು ಎಂಬುದಾಗಿ ಲಾಡೆನ್ ಹೇಳಿಕೊಂಡಿದ್ದ. ಈಗಿನ ಸ್ಥಿತಿ ನೋಡಿದರೆ ಲಾಡೆನ್ ಬಿಡೆನ್ ಬಗ್ಗೆ ಊಹಿಸಿದ್ದು ನಿಜವೆನಿಸುತ್ತದೆ.

2010ರ ಸಮಯದಲ್ಲಿ ಬರಾಕ್ ಒಬಾಮ ಅಮೇರಿಕ ಅಧ್ಯಕ್ಷನಾಗಿದ್ದ ವೇಳೆ ಇದೇ ಜೋ ಬಿಡೆನ್ ಉಪಾಧ್ಯಕ್ಷರಾಗಿದ್ದರು. ಆ ಸಮಯದಲ್ಲಿ ಒಸಾಮಾ ಬಿನ್ ಲಾಡೆನ್ ತನ್ನ ಸಹಚರನಾದ ಅತಿಯಾ ರೆಹಮಾನಿಗೆ ಬರೆದ 48 ಪುಟಗಳ ಸುದೀರ್ಘ ಪತ್ರದಲ್ಲಿ ಬಿಡೆನ್ ಬಗ್ಗೆ ಹೇಳಿಕೊಂಡಿದ್ದ. ಆ ಪತ್ರ ಲಾಡೆನ್ ಸಾವಿನ ನಂತರ ಅಮೇರಿಕ ವಶಪಡಿಸಿಕೊಂಡ ದಾಖಲೆಗಳಲ್ಲಿ ಸೇರಿತ್ತು. ಆ ಸಮಯದಲ್ಲಿ ಲಾಡೆನ್ ಅಧ್ಯಕ್ಷ ಬರಾಕ್ ಒಬಾಮನನ್ನು ಹಾಗು ಅಮೇರಿಕಾದ ಗುಪ್ತಚರ ಸಂಸ್ಥೆಯ ಅಂದಿನ ನಿರ್ದೇಶಕ ಡೇವಿಡ್ ಪೆಟ್ರಾಯಸ್ ಅವರನ್ನು ಹತ್ಯೆ ಮಾಡಲು ಸಹಚರರೊಡನೆ ಚರ್ಚಿಸಿದ್ದ.

ಅಮೇರಿಕ ನಿಯಮ ಪ್ರಕಾರ ಅಮೇರಿಕಾದ ಅಧ್ಯಕ್ಷ ಅಧಿಕಾರ ಅವಧಿಯಲ್ಲಿ ಸಾವಿಗೀಡಾದರೆ ಉಪಾಧ್ಯಕ್ಷರು ಅಧ್ಯಕ್ಷರಾಗುತ್ತಾರೆ ಎಂಬುದನ್ನು ತಿಳಿದು ಒಸಾಮಾ ಅಮೇರಿಕ ಅಧ್ಯಕ್ಷ ಒಬಾಮನನ್ನು ಹತ್ಯೆ ಮಾಡಿಸಲು ಚಿಂತಿಸಿದ್ದ. ಒಂದು ವೇಳೆ ಆ ರೀತಿಯಾದರೆ ಬಿಡೆನ್ ಅಮೇರಿಕಾದ ಅಧ್ಯಕ್ಷರಾಗುತ್ತಾರೆ, ಆಗ ಬಿಡೆನ್ ನ ಅಸಮರ್ಥ ಆಡಳಿತದಿಂದಾಗಿ ಅಮೆರಿಕ ಪತನದತ್ತ ಸಾಗಲಿದೆ ಎಂಬುದಾಗಿ ಲಾಡೆನ್ ಯೋಜನೆಯಾಗಿತ್ತು.

ಅಫ್ಘಾನ್ ವಿಷಯದಲ್ಲಿ ಜೋ ಬಿಡೆನ್ ಬುದ್ಧಿವಂತಿಕೆ ಜಗಜ್ಜಾಹೀರಾಗಿದ್ದು ವಿಶ್ವದೆಲ್ಲೆಡೆ ಟೀಕೆ ವ್ಯಕ್ತವಾದ ಬೆನ್ನಲ್ಲೇ ಒಬ್ಬ ಭಯೋತ್ಪಾದಕನಾಗಿದ್ದ ಲಾಡೆನ್ ಕೂಡ ಬಿಡೆನ್ ಅಸಮರ್ಥತೆಯನ್ನು ಗುರುತಿಸಿದ್ದು ಅಮೆರಿಕಕ್ಕೆ ಅದರಲ್ಲೂ ಅಧ್ಯಕ್ಷ ಬಿಡೆನ್ ಗೆ ಅವಮಾನಕರವಾಗಿ ಪರಿಣಮಿಸಿದೆ. ಕಳೆದ ವಾರವಷ್ಟೇ ಅಮೇರಿಕಾದಲ್ಲಿ ಶೇಕಡಾ 53ರಷ್ಟಿದ್ದ ಜೋ ಬಿಡೆನ್ ಜನಪ್ರಿಯತೆ ಮೊನ್ನೆ ಮೊನ್ನೆ 46 ಶೇಖಡಾಕ್ಕೆ ಕುಸಿದಿತ್ತು. ಇದು ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments