HomeKarnatakaಮೈಸೂರು ಅತ್ಯಾಚಾರ ಆರೋಪಿಗಳು ಅರೆಸ್ಟ್: ತಮಿಳುನಾಡಿನಲ್ಲಿ ಬಂಧಿಸಿದ ಕರ್ನಾಟಕ ಪೊಲೀಸರು

ಮೈಸೂರು ಅತ್ಯಾಚಾರ ಆರೋಪಿಗಳು ಅರೆಸ್ಟ್: ತಮಿಳುನಾಡಿನಲ್ಲಿ ಬಂಧಿಸಿದ ಕರ್ನಾಟಕ ಪೊಲೀಸರು

ಮೈಸೂರು: ದೇಶದಾದ್ಯಂತ ಸಂಚಲ ಸೃಷ್ಟಿಸಿದ್ದ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಒಟ್ಟು 80 ಪೊಲೀಸರ 5 ತಂಡಗಳಿಂದ ಕಾರ್ಯಾಚರಣೆ ನಡೆಸಿ ಘಟನೆ ನಡೆದ 85 ಗಂಟೆಗಳಲ್ಲಿ ಕಾಮುಕ ಗುಂಪನ್ನು ಹಿಡಿದು ಹೆಡೆಮುರಿಕಟ್ಟಿದ್ದಾರೆ.

ಆಗಸ್ಟ್ 24 ರ ಮಂಗಳವಾರ ಇಳಿ ಸಂಜೆಯ ಸಮಯ ಮೈಸೂರು ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ತನ್ನ ಗೆಳೆಯನ ಜತೆ ಏಕಾಂತದಲ್ಲಿದ್ದ ಸಂದರ್ಭ 6 ಮಂದಿ ದುರುಳರು ಗೆಳೆಯನನ್ನು ಹೊಡೆದು ಯುವತಿಯ ಸಾಮೂಹಿಕ ಅತ್ಯಾಚಾರ ನಡೆಸಿತ್ತು. ಆರೋಪಿಗಳ ಬಂಧನವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಕರ್ನಾಟಕ ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಾಡುತ್ತಿದ್ದರು. ನೆರೆಯ ಕೇರಳ ಹಾಗು ತಮಿಳುನಾಡಿಗೂ ತಂಡವನ್ನು ಕಳುಹಿಸಲಾಗಿತ್ತು.

ಘಟನಾ ಸ್ಥಳದಲ್ಲಿ ದೊರಕಿದ್ದ ಮದ್ಯದ ಬಾಟಲಿಗಳ ಹಿಂದೆ ಹೋದ ಪೊಲೀಸರು, ಅದನ್ನು ಖರೀದಿಸಿದ ಸ್ಥಳಗಳ ಆಸುಪಾಸಿನ ಸಿಸಿಟಿವಿ ಫೂಟೇಜುಗಳ ನೆರವಿನಿಂದ ಆರೋಪಿಗಳ ಚಹರೆಯನ್ನು ಪತ್ತೆ ಹಚ್ಚುವ ಯತ್ನ ನಡೆಸಿದ್ದರು. ಜತೆಗೆ ಘಟನೆಯ ಜಾಗದಲ್ಲಿ ತಮಿಳುನಾಡಿನ ತಾಳವಾಡಿ ಬಸ್ ಟಿಕೆಟ್ ಕೂಡ ದೊರಕಿತ್ತು. ಹಲ್ಲೆಗೊಳಗಾದ ಯುವತಿಯ ಸ್ನೇಹಿತ ನೀಡಿದ ಮಾಹಿತಿ ಹಾಗು ಆರೋಪಿಗಳ ಮೊಬೈಲ್ ಸಿಗ್ನಲ್ ನೆರವು ಪಡೆದು ಇಂದು ಬೆಳಗ್ಗೆ ತಮಿಳುನಾಡಿನಲ್ಲಿ 4 ಮಂದಿಯನ್ನು ಬಂಧಿಸಲಾಗಿದೆ. ಓರ್ವ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ಒಟ್ಟು 5 ಆರೋಪಿಗಳು ಬಲೆಗೆ ಬಿದ್ದಿದ್ದು ಅವರೆಲ್ಲರನ್ನು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ

ವಿಚಾರಣೆಯಲ್ಲಿ ಈ ಆರೋಪಿಗಳು ಈ ಹಿಂದೆಯೂ ಇಂತಹದೇ ಘಟನೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕೆಲ ತಿಂಗಳ ಹಿಂದೆ ಮೈಸೂರಿನ ಕುವೆಂಪು ನಗರದಲ್ಲೂ ಇದೆ ತಂಡ ಒಂದು ಅತ್ಯಾಚಾರ ನಡೆಸಿದ್ದು ಈ ಕುರಿತು ಕೇಸು ದಾಖಲಾಗದ ಕಾರಣ ವಿಷಯ ಹೊರಗೆ ಬರಲಿಲ್ಲ ಎನ್ನಲಾಗಿದೆ.

ಮೂಲಗಳ ಪ್ರಕಾರ ಸಂತ್ರಸ್ತೆ ಹಾಗು ಆಕೆಯ ಗೆಳೆಯ ಆ ನಿರ್ಜನ ಜಾಗಕ್ಕೆ ಸತತ ಮೂರು ದಿನಗಳ ಕಾಲ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ. ಹಾಗಾಗಿ ಮೊದಲೇ ಯುವತಿಯ ಸತತ ಭೇಟಿಯನ್ನು ಗಮನಿಸಿದ್ದ ಕಾಮುಕರ ತಂಡ ಮಂಗಳವಾರ ತನ್ನ ಪ್ಲಾನ್ ಪ್ರಕಾರ ಯುವತಿಯನ್ನು ಅತ್ಯಾಚಾರ ನಡೆಸಿತ್ತು ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments