HomeSportsಪ್ಯಾರಾ ಒಲಿಂಪಿಕ್ ಹೈ ಜಂಪ್: ಬೆಳ್ಳಿ ಹಾಗು ಕಂಚು ಎರಡನ್ನೂ ಬಾಚಿಕೊಂಡ ಭಾರತ

ಪ್ಯಾರಾ ಒಲಿಂಪಿಕ್ ಹೈ ಜಂಪ್: ಬೆಳ್ಳಿ ಹಾಗು ಕಂಚು ಎರಡನ್ನೂ ಬಾಚಿಕೊಂಡ ಭಾರತ

ಟೋಕಿಯೋ: ಪ್ಯಾರಾ ಒಲಿಂಪಿಕ್ ನಲ್ಲಿ ನಡೆದ ಹೈ ಜಂಪ್ ಸ್ಪರ್ಧೆಯಲ್ಲಿ ಭಾರತದ ಸ್ಪರ್ಧಿಗಳು ಬೆಳ್ಳಿ ಹಾಗು ಕಂಚು ಎರಡನ್ನೂ ಗೆಲ್ಲುವ ಮೂಲಕ ಪಾರಮ್ಯ ಮೆರೆದಿದ್ದಾರೆ. ಮರಿಯಪ್ಪನ್ ತಂಗವೇಲು ಬೆಳ್ಳಿ ಗೆದ್ದರೆ, ಶರದ್ ಕುಮಾರ್ ಕಂಚಿನ ಪದಕ ಪಡೆದರು.

ಎತ್ತರ ಜಿಗಿತದ ಕ್ಲಾಸ್ ಟಿ42 ವಿಭಾಗದಲ್ಲಿ ಮರಿಯಪ್ಪನ್ ತಂಗವೇಲು 1.86 ಮೀಟರ್ ಎತ್ತರ ಜಿಗಿಯುವ ಮೂಲಕ ರಜತ ಪದಕಕ್ಕೆ ಕೊರಳೊಡ್ಡಿದರು. ಇವರು ಈ ಹಿಂದೆ 2016ರ ರಿಯೋ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದು ಇವರ ಎರಡನೆಯೇ ಪದಕವಾಗಿದೆ. ಮರಿಯಪ್ಪನ್ ಅವರಿಗೆ 5 ವರ್ಷ ಪ್ರಾಯವಾಗಿದ್ದಾಗ ಬಸ್ಸಿನಡಿಗೆ ಸಿಲುಕಿ ಅವರ ಬಲ ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ. ತಂದೆ ಬಿಟ್ಟುಹೋದ ಬಳಿಕ ತಾಯಿಯ ಆರೈಕೆಯಲ್ಲಿ ಬೆಳೆದ ಮರಿಯಪ್ಪನ್ ಇಂದು ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಶರದ್ ಕುಮಾರ್ ಅವರು 1.83 ಮೀಟರ ಎತ್ತರ ಜಿಗಿದು ಕಂಚಿನ ಪದಕ ಗೆದ್ದರು. ರಿಯೋ ಒಲಿಂಪಿಕ್ ನಲ್ಲಿ ಪದಕ ಗೆದ್ದಿದ್ದ ವರುಣ್ ಸಿಂಗ್ ಈ ವಿಭಾಗದಲ್ಲಿ ೭ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು. ರಿಯೋ ಒಲಿಂಪಿಕ್ ನಲ್ಲಿ ಬೆಳ್ಳಿ ಗೆದ್ದಿದ್ದ ಅಮೇರಿಕಾದ ಸ್ಯಾಮ್ ಗ್ರೀವ್ ಈ ಬಾರಿ 1.88 ಮೀಟರ್ ಎತ್ತರ ಹಾರಿ ಚಿನ್ನದ ಪದಕ ತನ್ನದಾಗಿಸಿದರು. ಚಿನ್ನ ಹಾಗು ಬೆಳ್ಳಿ ಪದಕಗಳು ರಿಯೋದಿಂದ ಟೋಕಿಯೋಗೆ ಅದೇ ಕ್ರೀಡಾಪಟುಗಳ ಮಧ್ಯೆ ಆಡಲು ಬದಲಾಗಿರುವುದು ಈ ಬಾರಿಯ ವಿಶೇಷ.

ಇದಕ್ಕೂ ಮೊದಲು ಶೂಟರ್ ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಸಿಂಘರಾಜ್ ಅದಾನ ಕಂಚಿನ ಪದಕ ಜಯಿಸಿದರು.

ಭಾರತ ಟೋಕಿಯೋ ಪ್ಯಾರಾ ಒಲಿಂಪಿಕ್ ನಲ್ಲಿ 2 ಚಿನ್ನ, 5 ಬೆಳ್ಳಿ ಹಾಗು 3 ಕಂಚಿನ ಪದಕಗಳೊಂದಿಗೆ ಇದುವರೆಗೆ ಒಟ್ಟು 10 ಪದಕ ಜಯಿಸಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments