HomeNationalಉತ್ತರ ಪ್ರದೇಶದಲ್ಲಿ ನಿಗೂಢ ಜ್ವರ: 10 ದಿನದಲ್ಲಿ 32ಕ್ಕೂ ಅಧಿಕ ಮಕ್ಕಳ ಸಾವು

ಉತ್ತರ ಪ್ರದೇಶದಲ್ಲಿ ನಿಗೂಢ ಜ್ವರ: 10 ದಿನದಲ್ಲಿ 32ಕ್ಕೂ ಅಧಿಕ ಮಕ್ಕಳ ಸಾವು

ಲಕ್ನೋ: ಉತ್ತರಪ್ರದೇಶದ ಫಿರೋಜಾಬಾದ್ ಪ್ರಾಂತ್ಯದಲ್ಲಿ ನಿಗೂಢ ಜ್ವರವೊಂದು ಕಾಣಿಸಿಕೊಂಡಿದ್ದು ಕಳೆದ 10 ದಿವಸಗಳಲ್ಲಿ 32ಕ್ಕೂ ಅಧಿಕ ಮಕ್ಕಳು ಸಾವಿಗೀಡಾಗಿದ್ದಾರೆ. ಈ ಜ್ವರವು ಹೆಚ್ಚುಕಡಿಮೆ ಡೆಂಗ್ಯೂವಿನ ಲಕ್ಷಣ ಹೊಂದಿದ್ದು ಮಕ್ಕಳಿಗೆ ಮಾರಕವಾಗಿ ಪರಿಣಮಿಸಿದೆ.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಫಿರೋಜಾಬಾದ್’ಗೆ ತಜ್ಞ ವೈದ್ಯರ ತಂಡವನ್ನು ಕಳುಹಿಸಿದೆ. ಈ ನಿಗೂಢ ಕಾಯಿಲೆಯು ಜ್ವರ, ಶರೀರದಲ್ಲಿ ನೋವು, ತಲೆನೋವು, ಡಿ ಹೈಡ್ರೇಶನ್, ಹೊಟ್ಟೆನೋವು, ಪ್ಲೇಟ್ಲೆಟ್’ನಲ್ಲಿ ಕ್ಷಿಪ್ರ ಇಳಿಕೆ ಲಕ್ಷಣಗಳನ್ನು ಒಳಗೊಂಡಿದೆ. ಕೆಲವರಲ್ಲಿ ಡೇಂಗ್ಯೂಸ್ ಪಾಸಿಟಿವ್ ಎಂದು ಬಂದಿದ್ದು ಕೋವಿಡ್ ನೆಗೆಟಿವ್ ಬಂದಿದೆ.

ಈ ನಿಗೂಢ ಕಾಯಿಲೆಯು ಫಿರೋಜಾಬಾದ್ ನಲ್ಲಿ ಮೊದಲ ಬಾರಿಗೆ ಆಗಸ್ಟ್ ೧೮ರಂದು ಕಾಣಿಸಿಕೊಂಡಿತ್ತು. ಇದರಿಂದಾಗಿ ಇಲ್ಲಿಯವರೆಗೆ 32 ಮಕ್ಕಳು ಹಾಗು 7 ಜನ ವಯಸ್ಕರು ಸಾವನ್ನಪ್ಪಿದ್ದಾರೆ. ಸ್ಥಳೀಯ ಬಿಜೆಪಿ ಶಾಸಕ ಮನೀಶ್ ಅಸೀಜ ಪ್ರಕಾರ ಇದುವರೆಗೆ ಈ ಡೆಂಗ್ಯೂ ಹೋಲುವ ನಿಗೂಢ ಕಾಯಿಲೆಯಿಂದಾಗಿ 44 ಮಂದಿ ಬಲಿಯಾಗಿದ್ದಾರೆ.

ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಫಿರೋಜಾಬಾದ್ ಗೆ ತೆರಳಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನು ಕಂಡು ಮಾತನಾಡಿಸಿದರು. ಈ ನಿಗೂಢ ಕಾಯಿಲೆಯಿಂದಾದ ಸಾವಿನ ಬಗ್ಗೆ ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವ ವಿದ್ಯಾಲಯ ಪರಿಶೀಲನೆ ನಡೆಸಲಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.

ಮುಂಜಾರುಕತಾ ಕ್ರಮವಾಗಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 6ರವರೆಗೆ ಒಂದರಿಂದ 8ನೇ ತರಗತಿಗಳವರೆಗೆ ಶಾಲೆಯನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಹೆಚ್ಚು ಕಡಿಮೆ ಡೆಂಗ್ಯೂವಿನ ಲಕ್ಷಗಳನ್ನು ಹೊಂದಿರುವ ಇದು ಡೆಂಗ್ಯೂವಿನ ಹೊಸ ಪ್ರಭೇಧ ಆಗಿರಬಹುದು ಎಂದು ಕೆಲವು ವೈದ್ಯರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments