HomeNationalಕೇರಳದಲ್ಲಿ ಮತ್ತೆ ಬಂತು ನಿಫಾ ವೈರಸ್: 12 ವರ್ಷದ ಬಾಲಕ ಮೃತ್ಯು, 17 ಪ್ರಾಥಮಿಕ ಸಂಪರ್ಕಿತರು...

ಕೇರಳದಲ್ಲಿ ಮತ್ತೆ ಬಂತು ನಿಫಾ ವೈರಸ್: 12 ವರ್ಷದ ಬಾಲಕ ಮೃತ್ಯು, 17 ಪ್ರಾಥಮಿಕ ಸಂಪರ್ಕಿತರು ನಿಗಾದಲ್ಲಿ

ಕೋಳಿಕ್ಕೋಡ್: ಹಿಂದೊಮ್ಮೆ ಕೇರಳವನ್ನು ಬಿಡದೆ ಕಾಡಿದ್ದ ನಿಫಾ ವೈರಸ್ ಮತ್ತೆ ರಾಜ್ಯವನ್ನು ವಕ್ಕರಿಸಿದ್ದು ನಿಫಾ ವೈರಸ್ ತಗುಲಿದ್ದ 12 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದ 17 ಜನರ ಮೇಲೆ ನಿಗಾ ಇರಿಸಲಾಗಿದೆ.

ನಿಫಾ ವೈರಸ್ ಲಕ್ಷಣ ಹೊಂದಿ ಕೋಳಿಕ್ಕೋಡ್ ಆಸ್ಪತ್ರೆಗೆ ದಾಖಲಾಗಿದ್ದ 12 ವರ್ಷದ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ. ಚತಮಂಗಲಂನ ಚೂಲೂರ್ ಪ್ರದೇಶದ ಹುಡುಗನನ್ನು ಸೆಪ್ಟೆಂಬರ್ ಒಂದರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ನಿಫಾ ಲಕ್ಷಣಗಳು ಮೇಲ್ನೋಟಕ್ಕೆ ದೃಢಪಟ್ಟ ಹಿನ್ನಲೆಯಲ್ಲಿ ಆತನ ಮಾದರಿಗಳನ್ನು ಪುಣೆಯ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿತ್ತು. ಅಲ್ಲಿ ನಿಫಾ ಎಂದು ರಿಪೋರ್ಟ್ ಬಂದಿತ್ತು. ಈಗ ಆ ಮೃತ ಹುಡುಗನ ಸಂಪರ್ಕಕ್ಕೆ ಬಂದಿದ್ದ 17 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಸುದ್ದಿ ತಿಳಿದ ಕೂಡಲೇ ಕೇಂದ್ರ ಸರಕಾರವು ಕೇರಳಕ್ಕೆ ರಾಷ್ಟ್ರೀಯ ರೋಗ ನಿಯಂತ್ರಣ ತಂಡವನ್ನು ಕಳುಹಿಸಿದೆ. ರಾಜ್ಯ ಸರಕಾರ ಕೂಡ ತುರ್ತು ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು ಮೃತ ಬಾಲಕನ ಮನೆಯ 3 ಕಿಲೋ ಮೀಟರ್ ಸುತ್ತಮುತ್ತ ತೀವ್ರ ನಿಗಾ ವಹಿಸಿ ಬಂದ್ ಮಾಡಲಾಗಿದೆ. ಚತಮಂಗಲಂ ಪಂಚಾಯತ್‌ನ ವಾರ್ಡ್ ಸಂಖ್ಯೆ ಒಂಬತ್ತು ಪಜೂರ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಸುತ್ತಮುತ್ತಲಿನ ನಯಾರ್ಕುಜಿ, ಕೂಲಿಮಾಡ್, ಹೊಸದಂ ವಾರ್ಡ್‌ಗಳನ್ನು ಭಾಗಶಃ ಮುಚ್ಚಲಾಗಿದೆ, ಪ್ರದೇಶದಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲು ಮತ್ತು ಹೊರಗಡೆ ಜನರ ಸಂಚಾರವನ್ನು ನಿರ್ಬಂಧಿಸಲು ಪೊಲೀಸರನ್ನು ನಿಯೋಜಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments