HomeArticlesಮೌಲ್ಯಾಧಾರಿತ ಶಿಕ್ಷಣ ಹೇಗೆ ಮತ್ತು ಎತ್ತ

ಮೌಲ್ಯಾಧಾರಿತ ಶಿಕ್ಷಣ ಹೇಗೆ ಮತ್ತು ಎತ್ತ

ಮನುಷ್ಯನನ್ನು ಜ್ಞಾನಿಯನ್ನಾಗಿ ಮಾಡಬೇಕಾದ್ದು ಶಿಕ್ಷಣ…..

ಜ್ಞಾನವನ್ನು ಪಡೆದ ವಿಧ್ಯಾರ್ಥಿ ಅದನ್ನು ಸಮಾಜದ ಒಳಿತಿಗಾಗಿ ಬಳಸಬೇಕು,ಆಗಲೇ ಶಿಕ್ಷಣ ಸಾರ್ಥಕತೆ ಪಡೆದುಕೊಳ್ಳುವುದು.

ಆದರೆ ಇಂದಿನ ಶಿಕ್ಷಣ ನಮ್ಮ ಮಕ್ಕಳನ್ನು ನಿಜವಾಗಿಯೂ ಜ್ಞಾನಿಗಳನ್ನಾಗಿ ಮಾಡುತ್ತಿದೆಯೇ ಎಂಬುದನ್ನು ನಾವು ಆಲೋಚಿಸಬೇಕು, ಇಂದಿನ ಶಿಕ್ಷಣ ನಮ್ಮ ಮಕ್ಕಳಲ್ಲಿ ನಯಾಪೈಸದ ಜ್ಞಾನಾಭಿವೃದ್ದಿಯನ್ನೂ ಮಾಡುತ್ತಿಲ್ಲ, ಇಂದಿನ ಶಿಕ್ಷಣ ಕೇವಲ Exam Oriented ಶಿಕ್ಷಣ.

ಇಂದಿನ ಶಿಕ್ಷಣ ವ್ಯವಸ್ಥೆಯ ಪ್ರಕಾರ ಓರ್ವ ವಿಧ್ಯಾರ್ಥಿ ತನ್ನ Syllabus ಅನ್ನು ಉರು ಹೊಡೆದು ಪ್ರಶ್ನೆ ಪತ್ರಿಕೆಯಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ಬರೆದು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿಬಿಟ್ಟರೆ ಆ ವಿಧ್ಯಾರ್ಥಿ Brilliant Student.

ಆದರೆ ಹಾಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿಧ್ಯಾರ್ಥಿಗೆ ಎಷ್ಟು Concept ಗಳು ನಿಜವಾಗಿಯೂ ಅರ್ಥವಾಗಿವೆ…. ಆತ ಹಾಗೆ ಶಾಲಾ ಕಾಲೇಜುಗಳಲ್ಲಿ ಕಲಿತ ವಿಷಯವನ್ನು ತನ್ನ ಮುಂದಿನ ಜೀವನದಲ್ಲಿ ಹೇಗೆ Effective ಮತ್ತು Practical ಆಗಿ ಬಳಸಬಲ್ಲ ಎಂಬುದನ್ನು ನಮ್ಮ ಶಿಕ್ಷಣ ವ್ಯವಸ್ಥೆ Check ಮಾಡುವುದೇ ಇಲ್ಲ, ಹಾಗಾಗಿಯೇ ನಮ್ಮ ಬಹುತೇಕ ವಿಧ್ಯಾರ್ಥಿಗಳಿಗೆ ಓದಿರೋ ಬಹುತೇಕ ವಿಷಯಗಳು ಪರೀಕ್ಷೆ ಬರೆದ ನಂತರ ಜ್ಞಾಪಕವೂ ಇರೋದಿಲ್ಲ.

ಪದವಿ ಮತ್ತು ಸ್ನಾತಕೋತ್ತರ ಪದವಿಗಳು ಓರ್ವ ವಿಧ್ಯಾರ್ಥಿಯ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ, ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಪರೀಕ್ಷೆ ಪದ್ದತಿಯನ್ನು ಮತ್ತಷ್ಟು ಹಾಳು ಮಾಡಿಟ್ಟಿದೆ.

ನಿಮಗೆಲ್ಲ ಗೊತ್ತಿರುವಂತೆ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಸೆಮಿಸ್ಟರ್ ಪರೀಕ್ಷಾ ಪದ್ದತಿ ಇದೆ, ಹಾಗಾಗಿ ಅಲ್ಲಿ ಒಂದು Semester ನಲ್ಲಿ ನಮ್ಮ ವಿಧ್ಯಾರ್ಥಿಗಳು ಕಲಿಯೋ ವಿಷಯಗಳು ಆ Semester ಗೆ ಮಾತ್ರ ಮೀಸಲು, ಮುಂದಿನ Semester ನಲ್ಲಿ ಅದೇ ವಿಧ್ಯಾರ್ಥಿ ತಾನು ಹಿಂದೆ ಕಲಿತದ್ದೆಲ್ಲವನ್ನೂ ಮರೆತು ಹೊಸ Semester ಗಾಗಿ Ready ಆಗುತ್ತಾನೆ, ಅವನು ಅಪ್ಪೀತಪ್ಪಿ ಹಳೇ Semester ನ ವಿಷಯಗಳನ್ನು ಜ್ಞಾಪಿಸಿಕೊಳ್ಳೋದು ಹಳೇ Subject ಗಳು Backlogs ಇದ್ದು ಆ ವಿಷಯದ ಪರೀಕ್ಷೆಯ ದಿನಗಳು ಹತ್ತಿರ ಬಂದಾಗ ಮಾತ್ರ.

ಇನ್ನು ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಕಲಿಸೋ ಶಿಕ್ಷಣಕ್ಕೂ ಕೆಲಸ ಮಾಡಲು ನಮಗೆ Practically ಬೇಕಾದ ಶಿಕ್ಷಣಕ್ಕೂ ದೊಡ್ಡದಾದ ಅಂತರ ಇದೆ, ಅದನ್ನು ತುಂಬಿಸುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಎಂದಿಗೂ ಗಮನವನ್ನೇ ಹರಿಸೋದಿಲ್ಲ.

ಇನ್ನು ನಮ್ಮ ಪಠ್ಯಪುಸ್ತಕದಲ್ಲಿ ಇರುವ ಇತಿಹಾಸ ಬರೀ ಸೋಲಿನ ಇತಿಹಾಸ, ಹೀಗಾಗಿಯೇ ನಮ್ಮ ಮಕ್ಕಳಿಗೆ ಇಂದಿಗೂ ನಮ್ಮ ನಿಜವಾದ ಇತಿಹಾಸ ಗೊತ್ತಿಲ್ಲ, ನಮ್ಮ ದೇಶದ ಭವ್ಯ ಇತಿಹಾಸವನ್ನು BC, AD ಗಳ ತಕ್ಕಡಿಯಲ್ಲಿ ತೂಗಲಾಗಿದೆ.

ಹೀಗಾಗಿ ಇತಿಹಾಸವನ್ನು ಭಾರತೀಯ ದೃಷ್ಟಿಕೋನದಿಂದ ಮರು ರಚಿಸಬೇಕು ನಮ್ಮ ಋಷಿ ಪರಂಪರೆ ನಮಗೆ ಕೊಟ್ಟ ಜ್ಞಾನ ನಮ್ಮ ಮುಂದಿನ ಪೀಳಿಗೆ (ಮಕ್ಕಳಿಗೆ ತಿಳಿಯಬೇಕು) ಹೀಗಾಗಿ ಅವೆಲ್ಲವನ್ನೂ ಪಠ್ಯದಲ್ಲಿ ಸೇರಿಸಬೇಕು.

ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮ್ಮ ಮಕ್ಕಳಿಗೆ ತಿಳಿದಿಲ್ಲ ಹೀಗಾಗಿ ಇಡೀ ದೇಶದಾದ್ಯಂತ ಪ್ರತಿ ಹಳ್ಳಿಗಳಿಂದ ಆಯಾ ಪ್ರಾಂತ್ಯದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿಯನ್ನು ಕಲೆ ಹಾಕಬೇಕು, ಮತ್ತು ಅವುಗಳಲ್ಲಿ ಆಯ್ದ ಬಹುಮುಖ್ಯ ಹೋರಾಟಗಾರರ ಮಾಹಿತಿಯನ್ನು ಪಠ್ಯದಲ್ಲಿ ಅಳವಡಿಸಬೇಕು, ಮತ್ತು ಇಡೀ ದೇಶದಿಂದ ಸಂಗ್ರಹಿಸಲ್ಪಟ್ಟ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರ ಮಾಹಿತಿ ಒಳಗೊಂಡ ಪುಸ್ತಕಗಳು ಸರ್ಕಾರದಿಂದ ಮುದ್ರಿಸಲ್ಪಡಬೇಕು ಮತ್ತು ಆ ಪುಸ್ತಕಗಳು ಈ ದೇಶದ ಪ್ರತಿ ಶಾಲಾ ಕಾಲೇಜುಗಳು ಮತ್ತು ಗ್ರಂಥಾಲಯಗಳನ್ನು ಪಲುಪಬೇಕು, ದೇಶದ ಪ್ರತಿ ಶಾಲಾ ಕಾಲೇಜುಗಳಲ್ಲೂ ಪ್ರತಿ ದಿನ ಯಾವ ಸ್ವಾತಂತ್ರ್ಯ ಹೋರಾಟಗಾರರ ಜಯಂತಿ ಅಥವಾ ಸೃತಿ ದಿವಸ ಇರುತ್ತದೆಯೋ ಅಂದು ಆ ಸ್ವಾತಂತ್ರ್ಯ ಹೋರಾಟಗಾರರ ಬಗೆಗಿನ ಮಾಹಿತಿಯನ್ನು ಬೆಳಗ್ಗೆ ಅಥವಾ ಸಂಜೆ ಪ್ರಾರ್ಥನಾ ಸಮಯದಲ್ಲಿ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಳ್ಳಬೇಕು, ಅಥವಾ ಅದಕ್ಕಾಗಿಯೇ ಒಂದು ಅವಧಿ ಮೀಸಲಿಡಬೇಕು, ಇದರಿಂದ ನಮ್ಮ ಮಕ್ಕಳಿಗೆ ನಿಜವಾದ ಸ್ವಾತಂತ್ರ್ಯ ಹೋರಾಟದ ಇತಿಹಾಸ ತಿಳಿಯುತ್ತದೆ ಮತ್ತು ದೇಶದ ಬಗ್ಗೆ ಪ್ರೇಮಭಾವ ಮೂಡುತ್ರದೆ.

ನಮ್ಮ ಋಷಿ ಪರಂಪರೆ ನಮಗೆ ನೀಡಿದ Theoretical ಜ್ಞಾನವನ್ನು Practical Working Model ಆಗಿ ಬದಲಿಸಿ (ಭೂಮಿ ಮತ್ತು ಮತ್ತು ಸೂರ್ಯನ ನಡುವೆ ಇರುವ ಅಂತರವನ್ನು ನಮ್ಮ ಪೂರ್ವಜರು ಹೇಳಿದ್ದು, ಭಾರದ್ವಾಜರ ವಿಮಾನಶಾಸ್ತ್ರ ಇತ್ಯಾದಿ) ಅದರ ಮಾಹಿತಿಯನ್ನು ಪಠ್ಯ ಪುಸ್ತಕದಲ್ಲಿ ಹಂಚಿಕೊಳ್ಳಬೇಕು, ಇದರಿಂದ ಮಕ್ಕಳಲ್ಲಿ ಭಾರತ ವಿಶ್ವಗುರು ಎಂಬ ಭಾವನೆ ಗಟ್ಟಿಯಾಗುತ್ತದೆ.

ರಾಮಾಯಣ, ಮಹಾಭಾರತ, ಗೀತೆ ಮತ್ತು ಇತರ ಧಾರ್ಮಿಕ ಗ್ರಂಥಗಳು ನಮಗೆ ಕೊಟ್ಟ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸುವುದಕ್ಕಾಗಿ ಅವೆಲ್ಲವನ್ನೂ ನಮ್ಮ ಇತಿಹಾಸದಲ್ಲಿ ಅಳವಡಿಸಬೇಕು, ಹೀಗಾಗಲು ಮೊದಲಿಗೆ ರಾಮಾಯಣ ಮತ್ತು ಮಹಾಭಾರತ ಕಥೆಯಲ್ಲ, ಇತಿಹಾಸ ಎಂಬುದನ್ನು ಮೊದಲು ಗಟ್ಟಿಯಾಗಿ ನಿರೂಪಿಸಬೇಕು, ಅನಂತರ ಅವುಗಳನ್ನು ಇತಿಹಾಸದ ಪಠ್ಯದಲ್ಲಿ ಸೇರಿಸಬೇಕು, ಇದರಿಂದ ನಮ್ಮ ಮುಂದಿನ ಪೀಳಿಗೆ ಸಂಸ್ಕಾರಯುಕ್ತವಾಗಿ ಬೆಳೆಯುತ್ತದೆ.

ಇದೆಲ್ಲವೂ ಒಂದೆರಡು ದಿನಗಳಲ್ಲೂ ವರುಷಗಳಲ್ಲೋ ಆಗೋ ಕೆಲಸವಲ್ಲ. ಮೊದಲಿಗೆ ನಾವುಗಳು ಶಾಲಾ ಕಾಲೇಜಿನ ಮುಖ್ಯಸ್ಥರನ್ನು ಸಂಪರ್ಕ ಮಾಡಿ ಮಕ್ಕಳಿಗೆ ಮೌಲ್ಯ ಶಿಕ್ಷಣದ ತಿಳುವಳಿಕೆ ನೀಡಲು ಶುರು ಮಾಡಬೇಕು, ಸ್ವಯಂಪ್ರೇರಿತವಾಗಿ ಬರುವ ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ಮೌಲ್ಯ ಶಿಕ್ಷಣದ ಪರಿಚಯ ಮಾಡಿಸಬೇಕು, ಅನಂತರ ಒಂದೊಂದೇ ಶಾಲೆಗಳಲ್ಲಿ ಮೌಲ್ಯ ಶಿಕ್ಷಣಕ್ಕಾಗಿ ವಾರದಲ್ಲಿ ಒಂದೋ ಎರಡೋ ಅವಧಿಯನ್ನು ಮೀಸಲಾಗಿಡುವಂತೆ ಮಾಡಿ ಆ ಅವಧಿಯಲ್ಲಿ ಮೌಲ್ಯ ಶಿಕ್ಷಣವನ್ನು ಮಕ್ಕಳಿಗೆ ಬೋಧಿಸಬೇಕು, ಇದು ನನ್ನ ಪ್ರಕಾರ ಕಡ್ಡಾಯ ಮೌಲ್ಯ ಶಿಕ್ಷಣದ ಜಾರಿಗಾಗಿ ಹೋರಾಡುತ್ತಿರುವವರಿಗೆ ಸಿಗುವ, ಸಿಗಬಹುದಾದ, ಸಿಗಬೇಕಾದ ಮೊದಲ ಹಂತದ ಯಶಸ್ಸು.

ಈ ಹಂತಕ್ಕೆ ಬರುವ ಹೊತ್ತಿಗೆ ಎಲ್ಲ ಶಾಲಾ ಕಾಲೇಜುಗಳೂ, ವಿಧ್ಯಾರ್ಥಿಗಳೂ, ಪೋಷಕರೂ ಮೌಲ್ಯ ಶಿಕ್ಷಣದ ಮಹತ್ವವನ್ನು ಒಂದು ಮಟ್ಟಕ್ಕೆ ಅರಿತಿರುತ್ತಾರೆ, ಇಲ್ಲಿಂದ ಮುಂದೆ ಹಾಗೆ‌ ಮೌಲ್ಯ ಶಿಕ್ಷಣದ ಮಹತ್ವವನ್ನು ಅರಿತ ಒಂದಷ್ಟು ವಿಧ್ಯಾರ್ಥಿಗಳು, ಪೋಷಕರು, ವಿಧ್ಯಾ ಸಂಸ್ಥೆಗಳು, ಶಿಕ್ಷಣ ತಜ್ಞರು, ರಾಜಕಾರಣಿಗಳು ಎಲ್ಲರನ್ನೂ ಜೊತೆಗೂಡಿಸಿಕೊಂಡು ಒಂದು ಯಶಸ್ವಿ ಹೋರಾಟದ ಮೂಲಕ ಮೌಲ್ಯ ಶಿಕ್ಷಣವನ್ನು ಶಾಲಾ ಕಾಲೇಜುಗಳಲ್ಲಿ ಒಂದು ವಿಷಯವಾಗಿ ಕಡ್ಡಾಯವಾಗಿ ಜಾರಿಗೆ ತರುವುದರಲ್ಲಿ ಯಶಸ್ವಿಯಾದರೆ ಅದು ಹೋರಾಟಗಾರರ ಎರಡನೇ ಹಂತದ ಯಶಸ್ಸು.

ಇಷ್ಟನ್ನು ಯಶಸ್ವಿಯಾಗಿ ಮಾಡಿದರೆ ಸಮಯ ಕಳೆದಂತೆ ಸಮಾಜ ಮೌಲ್ಯ ಶಿಕ್ಷಣಕ್ಕೆ ಒಗ್ಗಿಕೊಳ್ಳುತ್ತದೆ ಮತ್ತು ಮೌಲ್ಯ ಶಿಕ್ಷಣದ ಮಹತ್ವ ಬಹುತೇಕ ಎಲ್ಲರಿಗೂ ಅರ್ಥವಾಗಿರುತ್ತದೆ, ಮತ್ತು ಎಂದೋ ಒಂದು ದಿನ ಸಮಾಜದ ಮಧ್ಯದಿಂದಲೇ ಇಡೀ ಶಿಕ್ಷಣ ವ್ಯವಸ್ಥೆಯನ್ನು ಮೌಲ್ಯಾಧಾರಿತ ಮತ್ತು Practical Oriented ಅಗಿಸಬೇಕೆಂಬ ಕೂಗು ಕೇಳಿ ಬರುತ್ತದೆ, ಸಮಯಕ್ಕೆ ಸರಿಯಾಗಿ ಆ ಕೂಗಿನ ಆಧಾರದಲ್ಲಿ ಆಳುವ ಸರ್ಕಾರದ ಗಮನ ಸೆಳೆದು ಮೌಲ್ಯಾಧಾರಿತ, Practical Oriented ಶಿಕ್ಷಣವನ್ನು ಜಾರಿಗೆ ತರುವುದರಲ್ಲಿ ಯಶಸ್ವಿಯಾದರೆ ಅದು ಹೋರಾಟಗಾರಿಗೆ ಸಿಗಬಹುದಾದ ಅಂತಿಮ ಹಂತದ ಯಶಸ್ಸು, ಮತ್ತು ಇದನ್ನು ಸಾಧಿಸಲು ತಾಳ್ಮೆ, ಬುದ್ಧಿವಂತಿಕೆ, ಪರಿಶ್ರಮ, ದೃಡ ವಿಶ್ವಾಸ, ಛಲ ಇವೆಲ್ಲವೂ ಅವಶ್ಯಕ.

– ಸುಭಾಷ್ ಬಂಗಾರಪೇಟೆ

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments