
ನವದೆಹಲಿ: ಕೇದಾರನಾಥ ಸೇರಿ ಚಾರಧಾಮ್ ಸಂಪರ್ಕಿಸುವ ರಸ್ತೆಗಳ ಅಗಲೀಕರಣದ ವಿಷಯ ಈಗ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಗಂಗೋತ್ರಿ ,ಯಮುನೋತ್ರಿ, ಕೇದಾರನಾಥ ಹಾಗೂ ಬದ್ರಿನಾಥ ಕ್ಷೇತ್ರಗಳು ಸೇರಿದ ಚಾರಧಾಮ ಯಾತ್ರೆ ಎಂದು ಕರೆಯಲಾಗುತ್ತದೆ. ಈ ನಾಲ್ಕು ಕ್ಷೇತ್ರಗಳನ್ನು ಸಂಪರ್ಕಿಸುವ ರಸ್ತೆಗಳು ಹಿಮಾಲಯದ ಪರ್ವತ ಶ್ರೇಣಿಗಳ ಮೂಲಕ ಹಾದುಹೋಗುತ್ತವೆ. ಈ ರಸ್ತೆಗಳನ್ನು ಉನ್ನತೀಕರಿಸುವ ಉದ್ದೇಶದಿಂದ ಅಗಲೀಕರಣ ನಡೆಯುತ್ತಿದೆ.
ಈ ರಸ್ತೆಗಳು ಚೀನಾದ ಗಡಿಭಾಗದಲ್ಲಿರುವ ರಸ್ತೆಗಳಿಗೆ ಫೀಡರ್ ರಸ್ತೆಗಳಂತೆ ಕಾರ್ಯವನ್ನು ನಿರ್ವಹಿಸುತ್ತವೆ. ಹಾಗಾಗಿ ರಸ್ತೆಗಳ ಅಗಲೀಕರಣ ಮಿಲಿಟರಿ ಉದ್ದೇಶವನ್ನು ಸಹ ಸಹ ಹೊಂದಿದೆ. ಆದರೆ ರಸ್ತೆಗಳ ಅಗಲೀಕರಣ ಇಲ್ಲಿನ ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಒಂದು ಎನ್.ಜಿ.ಓ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.ಬ್ರಹ್ಮೋಸ್ ನಂತಹ ಕ್ಷಿಪಣಿಗಳನ್ನು ಚೀನಾದ ಗಡಿ ಭಾಗಗಳಿಗೆ ತಲುಪಿಸಲು ರಸ್ತೆಗಳ ಅಗಲೀಕರಣ ಅನಿವಾರ್ಯ ಎನ್ನುವುದು ಸರಕಾರದ ವಾದ. ರಸ್ತೆಗಳ ಅಗಲೀಕರಣವನ್ನು ಮಾಡದೆ ಹೋದರೆ ದೇಶದ ಸುರಕ್ಷತೆಯ ವಿಷಯದಲ್ಲಿ ರಾಜಿಯನ್ನು ಮಾಡಿಕೊಂಡಂತಾಗುತ್ತದೆ ಎಂದು ಸರ್ಕಾರ ವಾದಿಸುತ್ತಿದೆ.
ಸರಕಾರದ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ಅಟಾರ್ನಿ ಜನರಲ್ ವೇಣುಗೋಪಾಲ್ ವಾದವನ್ನು ಮಂಡಿಸಿದರು












































