HomeCoastalಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ರಾಜೇಂದ್ರ ಕುಮಾರ್ ವಿಧಾನ ಪರಿಷತ್ ಅಖಾಡಕ್ಕೆ: ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ?

ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ರಾಜೇಂದ್ರ ಕುಮಾರ್ ವಿಧಾನ ಪರಿಷತ್ ಅಖಾಡಕ್ಕೆ: ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ?

ಮಂಗಳೂರು/ಉಡುಪಿ: ಕಳೆದ ಬಾರಿ ಲೋಕಸಭಾ ಸ್ಥಾನಕ್ಕೆ ಕಣ್ಣಿರಿಸಿ ಆ ಬಳಿಕ ಸುಮ್ಮನಾಗಿದ್ದ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಈ ಬಾರಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಪಕ್ಷೇತರರಾಗಿ ಸ್ಪರ್ಧಿಸುವ ಇಚ್ಛೆ ಹೊಂದಿರುವ ರಾಜೇಂದ್ರ ಕುಮಾರ್ ಜತೆಜತೆಗೆ ಕಾಂಗ್ರೆಸ್ ಟಿಕೆಟ್ ಪಡೆಯಲೂ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಪೂರಕವಾಗಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ರಾಜೇಂದ್ರ ಕುಮಾರ್ ಅವರೊಡನೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಟಿಕೆಟ್ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಶಿವಕುಮಾರ್ ಭೇಟಿ ಮಾಡಿದ ನಿಯೋಗ ರಾಜೇಂದ್ರ ಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಮನವಿ ಮಾಡಿದೆ. ಬೈಂದೂರ್ ಮಾಜಿ ಶಾಸಕ ಗೋಪಾಲ್ ಪೂಜಾರಿ ಸಹಿತ ಹಲವು ಕಾಂಗ್ರೆಸ್ ಮುಖಂಡರು ನಿಯೋಗದಲ್ಲಿ ಇದ್ದರು. ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಹಿಡಿತ ಇರುವ ಕಾರಣ ಈ ಹಿಂದೆ ಮಂಗಳೂರು ಲೋಕಸಭಾ ಚುನಾವಣೆ ವೇಳೆ ರಾಜೇಂದ್ರ ಕುಮಾರ್ ಅವರನ್ನು ಸೆಳೆಯಲು ರಾಜಕೀಯ ಪಕ್ಷಗಳು ಪ್ರಯತ್ನಿಸಿದ್ದವು. ಆದರೆ ಸಾರ್ವಜನಿಕ ವಲಯದಲ್ಲಿ ರಾಜೇಂದ್ರ ಕುಮಾರ್ ಬಗ್ಗೆ ಅಂತಹ ಸದಭಿಪ್ರಾಯ ಇಲ್ಲ. ಈ ಹಿಂದೆ ಮಂಗಳೂರು ನಗರವನ್ನೆಲ್ಲ ಟ್ರಾಫಿಕ್ ಜಾಮ್ ಮಾಡಿಸಿ ಜನ್ಮ ದಿನ ಸಮಾರಂಭ ಆಚರಿಸಿದ ಸಂದರ್ಭ ಇಡೀ ನಗರ ಶಾಪ ಹಾಕಿತ್ತು. ಜನರೊಂದಿಗೆ ಬೆರೆಯುವ ವ್ಯಕ್ತಿತ್ವ ಕೂಡ ಅವರದ್ದಲ್ಲ. ಕೇವಲ ಹಣಬಲದ ಮೇಲೆ ಚುನಾವಣೆಗೆ ಧುಮುಕುವ ಉತ್ಸಾಹದಲ್ಲಿ ರಾಜೇಂದ್ರ ಕುಮಾರ್ ಇದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿಯಿಂದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದ್ದು ಪಕ್ಷ ಈಗಾಗಲೇ ಒಂದು ಸುತ್ತಿನ ಸಭೆಗಳನ್ನು ನಡೆಸಿ ಪ್ರಚಾರ ಕಾರ್ಯಕ್ಕೆ ಅಣಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments