
ಬೆಂಗಳೂರು: ರಾಜ್ಯದ ಉಸ್ತುವಾರಿ ಸಚಿವ ಸ್ಥಾನಗಳಲ್ಲಿ ಭಾರೀ ಬದಲಾವಣೆ ಮಾಡಲಾಗಿದ್ದು ಹೆಚ್ಚಿನ ಸಚಿವರ ತವರು ಜಿಲ್ಲೆ ಬಿಟ್ಟು ಇತರೆ ಜಿಲ್ಲೆಗಳ ಉಸ್ತುವಾರಿ ಸಚಿವ ಸ್ಥಾನ ವಹಿಸಿಕೊಡಲಾಗಿದೆ. ಹೆಚ್ಚಿನವರು ಕಣ್ಣಿಟ್ಟಿದ್ದ ಬೆಂಗಳೂರು ನಗರ ಉಸ್ತುವಾರಿ ಸ್ಥಾನವನ್ನು ಮುಖ್ಯಮಂತ್ರಿಗಳು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ಈಶ್ವರಪ್ಪನವರಿಗೆ ಶಿವಮೊಗ್ಗ ಬದಲು ಚಿಕ್ಕಮಗಳೂರು ಜಿಲ್ಲೆ ನೀಡಲಾಗಿದೆ. ಅಂಗಾರ ಅವರಿಗೆ ದಕ್ಷಿಣ ಕನ್ನಡ ಬಿಟ್ಟು ಉಡುಪಿ, ಸುನಿಲ್ ಕುಮಾರ್ ಅವರಿಗೆ ಉಡುಪಿ ಬಿಟ್ಟು ದಕ್ಷಿಣ ಕನ್ನಡ, ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ಬಿಟ್ಟು ಬೆಂಗಳೂರು ಗ್ರಾಮಾಂತರ, ಆನಂದ್ ಸಿಂಗ್ ಅವರಿಗೆ ವಿಜಯನಗರ ಬಿಟ್ಟು ಕೊಪ್ಪಳ ಹೀಗೆ ಅದಲು ಬದಲು ಮಾಡಲಾಗಿದೆ.
ಗೋವಿಂದ ಕಾರಜೋಳ ಅವರಿಗೆ ಬೆಳಗಾವಿ, ಶ್ರೀರಾಮುಲು ಅವರಿಗೆ ಬಳ್ಳಾರಿ, ವಿ ಸೋಮಣ್ಣ ಅವರಿಗೆ ಚಾಮರಾಜನಗರ, ಉಮೇಶ್ ಕಟ್ಟಿ ಅವರಿಗೆ ವಿಜಯಪುರ, ಆರಗ ಜ್ಞಾನೇಂದ್ರ ಅವರಿಗೆ ತುಮಕೂರು, ಅಶ್ವಥನಾರಾಯಣ ಅವರಿಗೆ ರಾಮನಗರ, ಸಿಸಿ ಪಾಟೀಲ್ ಬಾಗಲಕೋಟೆ, ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಉತ್ತರ ಕನ್ನಡ, ಪ್ರಭು ಚವಾಣ್ ಯಾದಗಿರಿ, ಮುರುಗೇಶ್ ನಿರಾಣಿ ಕಲ್ಬುರ್ಗಿ, ಶಿವರಾಂ ಹೆಬ್ಬಾರ್ ಅವರಿಗೆ ಹಾವೇರಿ ಜಿಲ್ಲೆ ನೀಡಲಾಗಿದೆ.
ಇನ್ನುಳಿದಂತೆ ಸೋಮಶೇಖರ್ ಮೈಸೂರು, ಬಿಸಿ ಪಾಟೀಲ್ ಚಿತ್ರದುರ್ಗ ಮತ್ತು ಗದಗ, ಬಸವರಾಜ್ ದಾವಣಗೆರೆ, ಕೆ.ಗೋಪಾಲಯ್ಯ ಹಾಸನ ಮತ್ತು ಮಂಡ್ಯ, ಶಶಿಕಲಾ ಜೊಲ್ಲೆ ವಿಜಯನಗರ, ಎಂಟಿಬಿ ನಾಗರಾಜ್ ಚಿಕ್ಕಬಳ್ಳಾಪುರ, ನಾರಾಯಣಗೌಡ ಶಿವಮೊಗ್ಗ, ಬಿಸಿ ನಾಗೇಶ್ ಕೊಡಗು, ಹಾಲಪ್ಪ ಆಚಾರ್ ಧಾರವಾಡ, ಶಂಕರ್ ಪಾಟೀಲ್ ರಾಯಚೂರು ಮತ್ತು ಬೀದರ್ ಹಾಗು ಮುನಿರತ್ನ ಕೋಲಾರದ ಉಸ್ತುವಾರಿ ಸಚಿವರಾಗಿ ನಿಯುಕ್ತಿಗೊಂಡಿದ್ದಾರೆ.
ಅಚ್ಚರಿ ಎಂಬಂತೆ ಆರ್ ಅಶೋಕ್ ಹಾಗು ಜೆಸಿ ಮಾಧುಸ್ವಾಮಿ ಅವರಿಗೆ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಲಾಗಿಲ್ಲ.












































