HomeAutomobileನಿಸ್ಸಾನ್ ಎಲೆಕ್ಟ್ರಿಕ್ ಕಾರುಗಳು ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ: ಭಾರತ ಇವಿ ಕಾರುಗಳಿಗೆ ಸಂಭಾವ್ಯ ದೊಡ್ಡ ಮಾರುಕಟ್ಟೆ...

ನಿಸ್ಸಾನ್ ಎಲೆಕ್ಟ್ರಿಕ್ ಕಾರುಗಳು ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ: ಭಾರತ ಇವಿ ಕಾರುಗಳಿಗೆ ಸಂಭಾವ್ಯ ದೊಡ್ಡ ಮಾರುಕಟ್ಟೆ ಎಂದ ಕಂಪನಿ

ನಿಸ್ಸಾನ್ ಶೀಘ್ರದಲ್ಲೇ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನುಬಿಡುಗಡೆ ಮಾಡಲು ತಯಾರಿ ನಡೆಸಿದೆ. ಜಪಾನಿನ ಕಾರು ತಯಾರಕ ಕಂಪನಿ ಪ್ರಸ್ತುತ ದೇಶದಲ್ಲಿ ಇವಿ ವಾಹನಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದು ಮುಂಬರುವ ದಿನಗಳಲ್ಲಿ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಪ್ರಾರಂಭಿಸುವ ಕುರಿತು ಯೋಜನೆ ರೂಪಿಸುತ್ತಿದೆ.

ನಿಸ್ಸಾನ್ ಮೋಟಾರ್ ಇಂಡಿಯಾದ ಸಿಒಒ ಅಶ್ವನಿ ಗುಪ್ತಾ ಮಾತನಾಡಿ, ಭಾರತವು ಎಲೆಕ್ಟ್ರಿಕ್ ಕಾರುಗಳಿಗೆ ಮುಂದಿನ ದೊಡ್ಡ ಸಂಭಾವ್ಯ ಮಾರುಕಟ್ಟೆಯಾಗಿದೆ ಎಂದು ಹೇಳಿದ್ದಾರೆ. ಒಂದು ವರ್ಷದಲ್ಲಿ ಭಾರತೀಯ ಇವಿ ಮಾರುಕಟ್ಟೆ ಮೂರು ಪಟ್ಟು ಬೆಳೆದಿದೆ ಮತ್ತು ಭಾರತವು ಇವಿ ಮಾರುಕಟ್ಟೆಗೆ ದೊಡ್ಡ ಶಕ್ತಿಯಾಗಲಿದೆ ಎಂದು ನಾನು ನಿಮಗೆ ಹೇಳಬಲ್ಲೆ ಎಂದು ಅವರು ಹೇಳಿದರು.

ರೆನಾಲ್ಟ್-ನಿಸ್ಸಾನ್ ಮಿತ್ಸುಬಿಷಿ ಆಟೋಮೊಬೈಲ್ ಕಂಪನಿಗಳು ಜಂಟಿಯಾಗಿ ದೇಶದಲ್ಲಿ ಎಲೆಕ್ಟ್ರಿಕಲ್ ವಾಹನ ವಿಭಾಗವನ್ನು ಪ್ರವೇಶಿಸುವ ಸಾಧ್ಯತೆಯನ್ನು ಅಧ್ಯಯನ ಮಾಡುತ್ತಿದೆ ಎಂದು ಗುಪ್ತಾ ಹೇಳಿದರು.

ನಿಸ್ಸಾನ್ ತನ್ನ ಅಲಯನ್ಸ್ ಪಾಲುದಾರರಾದ ರೆನಾಲ್ಟ್ ಮತ್ತು ಮಿತ್ಸುಬಿಷಿಯೊಂದಿಗೆ ಸೇರಿ 2030ರ ವೇಳೆಗೆ ಐದು ಸಾಮಾನ್ಯ ಇವಿ ಪ್ಲಾಟ್‌ಫಾರ್ಮ್‌ಗಳನ್ನು ಆಧರಿಸಿ 35 ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಗುರುವಾರ ಘೋಷಿಸಿದೆ.

ಈ ಮೂರು ಕಂಪನಿಗಳು ಜಂಟಿಯಾಗಿ ಮುಂದಿನ ಐದು ವರ್ಷಗಳಲ್ಲಿ ತನ್ನ ಮಹತ್ವಾಕಾಂಕ್ಷೆಗಳನ್ನು ಪೂರೈಸಲು 23 ಬಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಲಿವೆ.

ಎಲೆಕ್ಟ್ರಿಕ್ ವಿಭಾಗದ ಕಾರುಗಳಲ್ಲಿ ಮೊದಲನೆಯದು ಕೆಲವೇ ವಾರಗಳಲ್ಲಿ ರಸ್ತೆಗಳ ಮೇಲೆ ಬರಲಿದೆ. ನಿಸ್ಸಾನ್ ಏರಿಯಾ ಇವಿ ಕ್ರಾಸ್ಒವರ್ ಮತ್ತು ರೆನಾಲ್ಟ್ ಮೆಗಾನ್ ಇ-ಟೆಕ್ ಎಲೆಕ್ಟ್ರಿಕ್ ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ. ಇವಿ ಪ್ಲಾಟ್‌ಫಾರ್ಮ್‌ನಲ್ಲಿ ವರ್ಷಕ್ಕೆ 1.5 ಮಿಲಿಯನ್ ಕಾರುಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments