HomeNationalಪಾಕಿಸ್ತಾನ ಪರ ಹುಂಡೈ ಕಾರು ಕಂಪನಿ ಟ್ವೀಟ್: ಹುಂಡೈ ಬಾಯ್ಕಾಟ್ ಮಾಡುವಂತೆ ಆಕ್ರೋಶ; ಹಲವರಿಂದ ಕಾರು...

ಪಾಕಿಸ್ತಾನ ಪರ ಹುಂಡೈ ಕಾರು ಕಂಪನಿ ಟ್ವೀಟ್: ಹುಂಡೈ ಬಾಯ್ಕಾಟ್ ಮಾಡುವಂತೆ ಆಕ್ರೋಶ; ಹಲವರಿಂದ ಕಾರು ಬುಕಿಂಗ್ ಕ್ಯಾನ್ಸಲ್

ನವದೆಹಲಿ: ದೇಶದ ಎರಡನೇ ಅತಿ ದೊಡ್ಡ ಕಾರು ಉತ್ಪಾದಕ ಕಂಪನಿ ಹುಂಡೈ ಕಾಶ್ಮೀರಿ ಪ್ರತ್ಯೇಕವಾದಿಗಳ ಹಾಗು ಕಾಶ್ಮೀರ ವಶಪಡಿಸಿಕೊಳ್ಳಲು ಹವಣಿಸುತ್ತಿರುವ ಪಾಕ್ ಉಗ್ರರ ಪರ ಟ್ವೀಟ್ ಮಾಡಿ ದೇಶಾಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ. ಹುಂಡೈ ಕಂಪನಿಯ ಪಾಕಿಸ್ತಾನ ಘಟಕ ತನ್ನ ಅಧಿಕೃತ ಟ್ವೀಟರ್ ಮತ್ತು ಫೇಸ್ ಬುಕ್ ನಲ್ಲಿ ಕಾಶ್ಮೀರ ಕುರಿತು ಮಾಡಿರುವ ಬರಹ ಭಾರತದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಹುಂಡೈ ಕಾರು ಕಂಪನಿಯ ಪಾಕಿಸ್ತಾನ ಘಟಕ ತನ್ನ ಟ್ವೀಟರ್ ಅಧಿಕೃತ ಖಾತೆಯಲ್ಲಿ ”ನಮ್ಮ ಕಾಶ್ಮೀರಿ ಸಹೋದರರ ತ್ಯಾಗವನ್ನು ನೆನಪಿಸಿಕೊಳ್ಳಬೇಕಾಗಿದೆ. ಕಾಶ್ಮೀರಿ ಜನರ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡಬೇಕಾಗಿದೆ” ಎಂದು ಟ್ವೀಟ್ ಮಾಡಿದೆ. ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಹುಂಡೈ ಕಂಪನಿಯನ್ನು ಬಹಿಷ್ಕರಿಸುವಂತೆ ಟ್ವೀಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಹುಂಡೈ ಕಂಪನಿಯ ಕಾರುಗಳನ್ನು ಖರೀದಿಸುವುದನ್ನು ನಿಲ್ಲಿಸುವಂತೆ ಟ್ವೀಟರ್ ಬಳಕೆದಾರರು ಮನವಿ ಮಾಡುತ್ತಿದ್ದಾರೆ.

ಕೂಡಲೇ ಎಚ್ಚೆತ್ತಿರುವ ಹುಂಡೈನ ಭಾರತೀಯ ವಿಭಾಗ ಡ್ಯಾಮೇಜ್ ಕಂಟ್ರೋಲ್ ಮಾಡುವ ಸಲುವಾಗಿ ನಾವು ಸದಾ ಭಾರತದ ಸಾರ್ವಭೌಮತೆಯನ್ನು ಗೌರವಿಸುತ್ತೇವೆ ಅನ್ನುವಂತಹ ಪೋಸ್ಟ್ ಅನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದೆ. ಭಾರತದ ರಾಷ್ಟ್ರೀಯತೆಯನ್ನು ನಾವು ಗೌರವಿಸುತ್ತೇವೆ, ಗೌರವಾನ್ವಿತ ದೇಶದಲ್ಲಿ ನಾವು ಸೇವೆ ನೀಡಲು ಬದ್ಧರಾಗಿದ್ದೇವೆ. ಹುಂಡೈ ಬ್ರ್ಯಾಂಡ್ ಗೆ ಭಾರತ ಎರಡನೇ ಮನೆಯಾಗಿದೆ ಎಂದು ಹೇಳಿಕೊಂಡಿದೆ.

ಈಗಾಗಲೇ ಹುಂಡೈ ಕಾರು ಬುಕಿಂಗ್ ಮಾಡಿದ್ದ ಕೆಲವರು ತಾವು ಬುಕಿಂಗ್ ಅನ್ನು ಕ್ಯಾನ್ಸಲ್ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ದೇಶೀಯ ಸಂಸ್ಥೆಗಳಾದ ಟಾಟಾ ಮೋಟಾರ್ಸ್, ಮಹೀಂದ್ರಾ ಕಡೆಗೆ ಹೋಗುತ್ತೇವೆ ಎಂದು ಪೋಸ್ಟ್ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments