HomeMovieಸುಧಾ ಬೆಳವಾಡಿ ಅಮ್ಮ ಕನ್ನಡದ ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನ

ಸುಧಾ ಬೆಳವಾಡಿ ಅಮ್ಮ ಕನ್ನಡದ ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನ

ಬೆಂಗಳೂರು : ಕನ್ನಡದ ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರು ಇಂದು ಸಂಜೆ 7:30ರ ಸುಮಾರಿಗೆ ವಯೋಸಹಜವಾದ ಖಾಯಿಲೆಯಿಂದ ನಿಧನರಾಗಿದ್ದಾರೆ. ಭಾರ್ಗವಿ ನಾರಾಯಣ್ ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿದ್ದು ಮಕ್ಕಳಾದ ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಡಿದ ಕಲಾವಿದರಾಗಿದ್ದಾರೆ. ಮೊಮ್ಮಗಳು ಸಂಯುಕ್ತ ಹೊರನಾಡು ಕೂಡ ಕನ್ನಡ ಸಿನೆಮಾ ನಾಯಕಿ ನಟಿಯಾಗಿದ್ದಾರೆ.

ಭಾರ್ಗವಿ ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರ ಸಾವಿನ ಸುದ್ದಿಯನ್ನು ಅವರ ಮೊಮ್ಮಗಳು ನಟಿ ಸಂಯುಕ್ತ ಹೊರನಾಡು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಭಾರ್ಗವಿ ಅವರು ಹಲವಾರು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವುದರ ಜತೆಗೆ ಕಿರುತೆರೆ ಹಾಗೂ ರಂಗಭೂಮಿಯಲ್ಲಿ ತಮ್ಮದೇ ಛಾಪನ್ನು ಒತ್ತಿದ್ದರು. ರಾಜಕುಮಾರ, ಪ್ರೀಮಿಯರ್ ಪದ್ಮಿನಿ, ಬಟರ್ ಫ್ಲೈ, ಇದೊಳ್ಳೆ ರಾಮಾಯಣ ಮುಂತಾದ ಚಿತ್ರಗಳಲ್ಲಿ ಭಾರ್ಗವಿ ಬಣ್ಣ ಹಚ್ಚಿದ್ದರು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments