
ಕೀವ್: ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ರಷ್ಯಾ ಗುರುವಾರ ತನ್ನ ಸೇನೆಯನ್ನು ಉಕ್ರೇನ್ ರಾಜಧಾನಿ ಕೀವ್ ಗೆ ನುಗ್ಗಿಸಿದೆ. ರಷ್ಯಾ ಧಾಳಿಯಿಂದ ಉಕ್ರೇನ್ ನ 40ಕ್ಕೂ ಅಧಿಕ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. 12ಕ್ಕೂ ಅಧಿಕ ಸೈನಿಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಸೇನಾ ಮೂಲಗಳು ಖಚಿತಪಡಿಸಿವೆ.
ಯುದ್ಧದ ಬೆನ್ನಲ್ಲೇ ಉಕ್ರೇನ್ ರಷ್ಯಾದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದೆ. ದಾಳಿಯ ನಂತರ ರಷ್ಯಾದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಗುರುವಾರ ಘೋಷಿಸಿದ್ದಾರೆ.
ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ದೇಶ ರಕ್ಷಿಸಲು ಬರುವ ಪ್ರತಿಯೊಬ್ಬರ ಕೈಗೂ ಶಸ್ತ್ರಾಸ್ತ್ರ ನೀಡುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ನಾಗರಿಕರಿಗೂ ಯುದ್ಧದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದ್ದಾರೆ. ನಮ್ಮ ದೇಶದ ನಗರಗಳ ರಸ್ತೆಗಳಲ್ಲಿ ಉಕ್ರೇನ್ ಪರ ನಿಲ್ಲಲು ಸಿದ್ಧವಾಗಿ. ದೇಶವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ನಾವು ಶಸ್ತ್ರಾಸ್ತ್ರಗಳನ್ನು ನೀಡುತ್ತೇವೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.












































