
ಬೆಂಗಳೂರು: ತರಗತಿಯೊಳಗೆ ಹಿಜಾಬ್ ದಾಹರಿಸಲು ಅನುಮತಿ ಕೋರಿ ಹಾಗು ಹಿಜಾಬ್ ನಿಷೇಧಿಸಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಗಳನ್ನು ಹೈಕೋರ್ಟ್ ತ್ರಿಸದಸ್ಯ ಪೀಠ ಇಂದು (ಶುಕ್ರವಾರ) ಅಂತ್ಯಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ.
ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಮುಖ್ಯ ನ್ಯಾ. ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾ.ಜೆಎಂ ಖಾಜಿ ಅವರುಗಳು ಫೆ.10 ರಂದು ಅರ್ಜಿ ವಿಚಾರಣೆ ಆರಂಭಿಸಿದ್ದರು. ರಾಜ ದಿನ ಹೊರತು ಪಡಿಸಿ ಸತತ ಎರಡು ವಾರಗಳ ಕಾಲ ವಿಚಾರಣೆ ನಡೆದಿದ್ದು ಇಂದಿಗೆ ವಿಚಾರಣೆ ಅಂತ್ಯಗೊಂಡಿದೆ.
ವದ ಮಂಡನೆಗೆ ಕೊನೆಯ ದಿನವಾದ ಇಂದು ಹಿಜಾಬ್ ಪರ ವಕೀಲರು, ಇಸ್ಲಾಂನಲ್ಲಿ ಬುರ್ಖಾ ಕಡ್ದಾಯ ಅಲ್ಲ ಆದರೆ ಹಿಜಾಬ್ ಕಡ್ಡಾಯವಾಗಿದೆ. ಕೇರಳ ಹಾಗೂ ಮದ್ರಾಸ್ ಹೈಕೋರ್ಟ್ ಗಳು ಇಸ್ಲಾಮಿಕ್ ಗ್ರಂಥಗಳನ್ನು ಪರಿಶೀಲಿಸಿ ಈ ನಿರ್ಧಾರಕ್ಕೆ ಬಂದಿವೆ ಎಂದು ವಾದಿಸಿದರು. ಮತ್ತೊಂದೆಡೆ ಸರ್ಕಾರದ ಆದೇಶವನ್ನು ಸಮರ್ಥಿಸಿಕೊಂಡಿರುವ ಸರಕಾರಿ ಪರ ವಕೀಲರು, “ಹಿಜಾಬ್ ಕೂಡ ಕಡ್ಡಾಯ ಧಾರ್ಮಿಕ ಆಚರಣೆಗಳ ಭಾಗವಲ್ಲ. ಶಿರೂರು ಮಠದ ಪ್ರಕರಣದಿಂದ ಮೊದಲುಗೊಂಡು ಶಬರಿಮಲೆ ಪ್ರಕರಣಗಳವರೆಗೆ ಇದು ಸಾಬೀತಾಗಿದೆ. ಹಿಜಾಬ್ ಸಂವಿಧಾನದ ಆರ್ಟಿಕಲ್ 25 ರ ಅಡಿಯಲ್ಲಿ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ” ಎಂದು ಪ್ರತಿವಾದ ಮಂಡಿಸಿದರು.
(ಗುಣಮಟ್ಟದ ಸುದ್ದಿಗಳನ್ನು ನೇರವಾಗಿ ನಿಮ್ಮ ಮೊಬೈಲ್ ಅಲ್ಲಿ ಪಡೆಯಲು ನಮ್ಮ ವಾಟ್ಸಾಪ್ ಗುಂಪಿಗೆ ಸೇರಿರಿ. ಲಿಂಕ್ : https://chat.whatsapp.com/GcMFEE9n0iP0mgfzL9qqyH )












































