
ಕಾಬೂಲ್: ಹಿಂಸೆಯನ್ನು ತನ್ನ ಉಸಿರಾಗಿಸಿಕೊಂಡಿರುವ ಇಸ್ಲಾಂ ಭಯೋತ್ಪಾದಕ ಸಂಘಟನೆ ತಾಲೀಬಾನ್, ದಶಕಗಳಿಂದ ಹಲವು ಸಹಸ್ತ್ರ ಜನರ ಸಾವಿಗೆ ಕಾರಣವಾಗಿರುವ ತಾಲಿಬಾನ್, ಕಳೆದ ವರ್ಷ ಹಿಂಸಾಚಾರದ ಮೂಲಕವೇ ತಾಲೀಬಾನ್ ಪ್ರಜಾಸತ್ತಾತ್ಮಕ ಸರಕಾರವನ್ನು ಕಿತ್ತೊಗೆದು ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ತಾಲಿಬಾನ್ ಇದೀಗ ರಷ್ಯಾ ಉಕ್ರೇನ್ ಬಿಕ್ಕಟ್ಟನ್ನು ಹಿಂಸಾಮಾರ್ಗ ಬಿಟ್ಟು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿ ನಗೆಪಾಟಲಿಗೆ ಈಡಾಗಿದೆ.
ಉಕ್ರೇನ್ ದೇಶದಲ್ಲಿ ನಾಗರಿಕರು ಸಾವಿಗೀಡಾಗುತ್ತಿರುವ ಬಗ್ಗೆ ತಾಲೀಬಾನ್ ಕಳವಳ ವ್ಯಕ್ತಪಡಿಸಿದ್ದು ಎರಡೂ ದೇಶಗಳು ಹಿಂಸೆಯಿಂದ ದೂರ ಉಳಿಯಬೇಕೆಂದು ಹೇಳಿಕೊಂಡಿದೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ತಾಲೀಬಾನ್ ಅಫ್ಘಾನಿಸ್ತಾನದ ತಟಸ್ಥ ವಿದೇಶಾಂಗ ನೀತಿಗೆ ಅನುಗುಣವಾಗಿ ನಾವು ಉಕ್ರೇನ್ ಹಾಗು ರಷ್ಯಾವನ್ನು ಶಾಂತಿ ಕಾಪಾಡಲು ಕೋರುತ್ತೇವೆ ಎಂದು ತಾಲೀಬಾನ್ ವಕ್ತಾರ ಹೇಳಿಕೊಂಡಿದ್ದಾನೆ.












































