HomeSportsಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಹೃದಯಾಘಾತಕ್ಕೆ ಬಲಿ

ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಹೃದಯಾಘಾತಕ್ಕೆ ಬಲಿ

ಥಾಯ್ಲ್ಯಾಂಡ್: ಆಘಾತಕಾರಿ ಬೆಳವಣಿಗೆಯಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಸ್ಪಿನ್ ಮಾಂತ್ರಿಕ್ ಶೇನ್ ವಾರ್ನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 52 ವರ್ಷ ವಯಸಾಗಿತ್ತು. ಸ್ಪಿನ್ ಸ್ಪೆಷಲಿಸ್ಟ್ ಆಗಿದ್ದ ಶೇನ್ ವಾರ್ನ್ ಕ್ರಿಕೆಟ್ ನಿವೃತ್ತಿ ನಂತರ ವೀಕ್ಷಕ ವಿವರಣೆಕಾರರಾಗಿ ಕೆಲಸ ಮಾಡುತ್ತಿದ್ದರು.

ವಾರ್ನ್ ಅವರನ್ನು ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತಿದ್ದು ತಮ್ಮ ಹೆಸರಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ವಾರ್ನೆ ಅವರ ಮ್ಯಾನೇಜರ್ ಶುಕ್ರವಾರ ಬಿಡುಗಡೆ ಮಾಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ ವಾರ್ನ್ ಅವರು ಶಂಕಿತ ಹೃದಯಾಘಾತದಿಂದ ಕೊಹ್ ಸಮುಯಿ, ಥೈಲ್ಯಾಂಡ್‌ನಲ್ಲಿ ನಿಧನರಾದರು ಎಂದು ದೃಢಪಡಿಸಿದ್ದಾರೆ.

ವಾರ್ನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು 708 ವಿಕೆಟ್‌ಗಳೊಂದಿಗೆ ಶ್ರೇಷ್ಠ ಬೌಲರ್ ಅನಿಸಿಕೊಂಡಿದ್ದಾರೆ. ಜತೆಗೆ 293 ಏಕದಿನ ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಕೂಡ ಪಡೆಡಿದ್ದು ಮತ್ತು ಎಲ್ಲಾ ಮಾದರಿಯ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು 300 ಕ್ಕೂ ಹೆಚ್ಚು ಪಂದ್ಯಗಳಳ್ಳಿ ಪ್ರತಿನಿಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments