HomeCoastalಹಿಜಾಬ್: ಕೋರ್ಟ್ ಆದೇಶ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದ ಮಂಗಳೂರಿನ ಕಾಲೇಜು ವಿದ್ಯಾರ್ಥಿಗೆ ಮುಸ್ಲಿಂ ದುಷ್ಕರ್ಮಿಗಳಿಂದ ಜೀವ ಬೆದರಿಕೆ

ಹಿಜಾಬ್: ಕೋರ್ಟ್ ಆದೇಶ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದ ಮಂಗಳೂರಿನ ಕಾಲೇಜು ವಿದ್ಯಾರ್ಥಿಗೆ ಮುಸ್ಲಿಂ ದುಷ್ಕರ್ಮಿಗಳಿಂದ ಜೀವ ಬೆದರಿಕೆ

ಮಂಗಳೂರು: ಕಳೆದ ವಾರ ಮಂಗಳೂರಿನ ರಥಬೀದಿಯ ದಯಾನಂದ ಪೈ ಸರಕಾರಿ ಪದವಿ ಕಾಲೇಜಿನಲ್ಲಿ ಹೈಕೋರ್ಟ್ ಆದೇಶ ಧಿಕ್ಕರಿಸಿ ಧಾರ್ಮಿಕ ಸಂಕೇತವಾದ ಹಿಜಾಬ್ ಧರಿಸಿ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರ ಬಗ್ಗೆ ಆಕ್ಷೇಪ ಎತ್ತಿದ್ದ ಅದೇ ಕಾಲೇಜಿನ ವಿದ್ಯಾರ್ಥಿ ಸಂದೇಶ್ ಎಂಬಾತನಿಗೆ ಮುಸ್ಲಿಂ ದುಷ್ಕರ್ಮಿಗಳಿಂದ ಜೀವ ಬೆದರಿಕೆ ಕರೆಗಳು ಬರತೊಡಗಿವೆ. ಸಂದೇಶ್ ಎಬಿವಿಪಿ ಕಾರ್ಯಕರ್ತ ಕೂಡ ಆಗಿದ್ದು ಕಾಲೇಜಿನಲ್ಲಿ ಹೈಕೋರ್ಟ್ ಆದೇಶ ಉಲ್ಲಂಘಿಸಿದನ್ನು ಪ್ರಶ್ನಿಸಿದ್ದನು.

ಶುಕ್ರವಾರ ಮಂಗಳೂರಿನ ರಥಬೀದಿಯ ಸರಕಾರಿ ಪದವಿ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಲು ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಮಧ್ಯಂತರ ಆದೇಶ ಉಲ್ಲಂಘಿಸಿ ಹಿಜಾಬ್ ಧರಿಸಿ ಬಂದಿದ್ದರು. ಇದನ್ನು ನೋಡಿದ ಕೆಲವು ವಿದ್ಯಾರ್ಥಿಗಳು ಇದನ್ನು ವಿರೋಧಿಸಿದ್ದರು. ಸಂದೇಶ್ ಅದರಲ್ಲಿ ಪ್ರಮುಖನಾಗಿದ್ದ. ಕೋರ್ಟ್ ಆದೇಶ ಇದ್ದರೂ ಆದೇಶ ಧಿಕ್ಕರಿಸಿದ್ದನ್ನು ಈತ ಆ ಹೇಳುವ ಪ್ರಯತ್ನ ಮಾಡಿದ್ದ. ಆದರೆ ಉದ್ಧಟತನದಿಂದ ವರ್ತಿಸಿದ್ದ ಆ ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಸಂದೇಶ ಮೇಲೆ ಅವಾಜ್ ಹಾಕಿದ್ದರು. ಒಬ್ಬ ವಿದ್ಯಾರ್ಥಿನಿ ಕಾಲೇಜು ನಿಮ್ಮ ಅಪ್ಪನದ್ದಾ ಎಂದು ಕೇಳಿದ್ದ ಪ್ರಸಂಗ ಕೂಡ ನಡೆದಿತ್ತು.

ಆ ಘಟನೆ ನಂತ್ರ ವಿದೇಶದಿಂದ ಇಂಟರ್ನೆಟ್ ಹಾಗು ಇತರ ಸೋಷಿಯಲ್ ಮೀಡಿಯಾ ಮೂಲಕ ಸಂದೇಶ್ ಮೊಬೈಲಿಗೆ ಜೀವ ಬೆದರಿಕೆ ಕರೆಗಳು ಹಾಗು ಸಂದೇಶಗಳು ಬರತೊಡಗಿವೆ. ನಿನ್ನ ಸಂಪೂರ್ಣ ವಿವರ ನಮ್ಮಲ್ಲಿದೆ. ನಿನ್ನ ದೈನಂದಿನ ಆಗುಹೋಗುಗಳೂ ನಮಗೆ ತಿಳಿದಿವೆ. ನೀನು ಇರಲ್ಲ. ಇನ್ನು ಒಂದು ವಾರದೊಳಗೆ ನಿನ್ನ ಮುಗಿಸುತ್ತೇವೆ ಎಂದು ಸಾಲು ಸಾಲು ಸಂದೇಶಗಳನ್ನು ಮತಾಂಧರು ಕಳುಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments