
ನವದೆಹಲಿ: ದೇಶದಾದ್ಯಂತ ಸಂಚಲನ ಸೃಷ್ಟಿಸಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ.
ಚಿತ್ರ ಬಿಡುಗಡೆಯಾದ ಮೊದಲ ದಿನದ ಗಳಿಕೆ ನೋಡಿ ಕೆಲವರು ಈ ಚಿತ್ರ ಸೋಲುತ್ತೆ ಎಂದೇ ಭಾವಿಸಿದ್ದರು. ಆದರೆ ಚಿತ್ರದ ಬಗ್ಗೆ ಬಾಯಿಂದ ಬಾಯಿಗೆ ಜನರೇ ಪ್ರಚಾರ ಕೊಡಲು ಆರಂಭಿಸಿದರೋ ಮತ್ತೆ ಚಿತ್ರ ತಿರುಗಿ ನೋಡಲಿಲ್ಲ. ಥಿಯೇಟರ್‌ಗಳಲ್ಲಿ ಏಳೇ ದಿನಕ್ಕೆ 100 ಕೋಟಿ ಗಳಿಕೆ ದಾಟಿ ಮುನ್ನುಗ್ಗುವತ್ತ ಸಾಗಿದೆ.
ಕಾಶ್ಮೀರ್ ಫೈಲ್ಸ್ ಮೊದಲ ದಿನ 3.55 ಕೋಟಿ, ಎರಡನೇ ದಿನ 8.5 ಕೋಟಿ, 3ನೇ ದಿನ 15 ಕೋಟಿ. ನಾಲ್ಕನೇ ದಿನ 15, ಐದನೇ ದಿನ 18 ಕೋಟಿ. 6ನೇ ದಿನ 19 ಕೋಟಿ ಹಾಗು 7ನೇ ದಿನ 18 ಕೋಟಿ ರುಪಾಯಿ ಕಲೆಕ್ಷನ್ ಮಾಡುವ ಮೂಲಕ ೭ ದಿನದಲ್ಲಿ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ 97.30 ಕೋಟಿ ರೂ. ಆಗಿದೆ.
ಈ ಚಿತ್ರವು ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆದ ನರಮೇಧ, ತಮ್ಮ ಸ್ವಂತ ಮನೆ ಮಠ ಬಿಟ್ಟು ವಲಸೆ, ಹಿಂದೂಗಳ ಮೇಲೆ ಮುಸ್ಲಿಮರ ಅತ್ಯಾಚಾರ, ಕೊಲೆ, ದರೋಡೆಯ ನೈಜ್ಯ ಕಥಾನಕವನ್ನು ಒಳಗೊಂಡಿದೆ. ಕಾಶ್ಮೀರಿ ಪಂಡಿತ ಹಿಂದೂಗಳನ್ನು ಕಾಶ್ಮೀರದಿಂದ ಓಡಿಸಿ ಮುಸ್ಲಿಂ ಬಾಹುಳ್ಯದ ಪ್ರದೇಶವನ್ನಾಗಿ ಮಾಡಿದ ಘೋರ ಇತಿಹಾಸವನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಚಿತ್ರದಲ್ಲಿ ತೋರಿಸಿದ್ದಾರೆ.












































