
ನವದೆಹಲಿ: ಮುಂದಿನ ತಿಂಗಳು ಏಪ್ರಿಲ್ 1 ರಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಲಿದ್ದು ಜತೆ ಜತೆಗೆ ಸಾಲು ರಜೆಗಳ ಕಾರಣ ಬರೋಬ್ಬರಿ 15 ದಿನ ಬಂದ್ ಇರಲಿವೆ. ಬ್ಯಾಂಕುಗಳು ನಮ್ಮ ದೈನಂದಿನ ಜೀವನದ ಮುಖ್ಯ ಕೇಂದ್ರವಾಗಿದ್ದು ಎಲ್ಲರೂ ಬ್ಯಾಂಕ್ ರಜ ದಿನಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೊಂದಿರುತ್ತಾರೆ.
ಮುಂದಿನ ಏಪ್ರಿಲ್ 2022 ರಲ್ಲಿ 15 ದಿನಗಳವರೆಗೆ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಈ 15 ದಿನಗಳಲ್ಲಿ 4 ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿವೆ. ಇವುಗಳ ಹೊರತಾಗಿ 9 ಇತರ ರಜಾದಿನಗಳು ಇರಲಿದ್ದು ವಿವಿಧ ರಾಜ್ಯಗಳಲ್ಲಿ ಆಯಾ ರಾಜ್ಯದ ರಜಾದಿನದ ಅನುಸಾರವಾಗಿ ಬ್ಯಾಂಕುಗಳು ಬಂದ್ ಇರಲಿವೆ.
ಏಪ್ರಿಲ್ ತಿಂಗಳಲ್ಲಿ ಬರುವ ಒಟ್ಟು 15 ಬ್ಯಾಂಕ್ ರಾಜ ದಿನಗಳು ಈ ಕೆಳಗಿನಂತಿವೆ.
ಏಪ್ರಿಲ್ 1: ಆರ್ಥಿಕ ವರ್ಷ ಮುಕ್ತಾಯ
ಏಪ್ರಿಲ್ 2: ಯುಗಾದಿ
ಏಪ್ರಿಲ್ 3: ಭಾನುವಾರ
ಏಪ್ರಿಲ್ 4: ಸರ್ಹುಲ್ ರಾಂಚಿ
ಏಪ್ರಿಲ್ 5: ಬಾಬು ಜಗಜೀವನ್ ರಾಮ್ ಅವರ ಜನ್ಮದಿನ (ಹೈದರಾಬಾದ್)
ಏಪ್ರಿಲ್ 9: ಎರಡನೇ ಶನಿವಾರ
ಏಪ್ರಿಲ್ 10: ಭಾನುವಾರ
ಏಪ್ರಿಲ್ 14: ಮಹಾವೀರ ಜಯಂತಿ/ ಬಾಬಾ ಅಂಬೇಡ್ಕರ್ ಜಯಂತಿ
ಏಪ್ರಿಲ್ 15: ಗುಡ್ ಫ್ರೈಡೆ
ಏಪ್ರಿಲ್ 16: ಬೊಹಾಗ್ ಬಿಹು (ಗುವಾಹಟಿ)
ಏಪ್ರಿಲ್ 17: ಭಾನುವಾರ
ಏಪ್ರಿಲ್ 21: ಗಡಿಯಾ ಪೂಜಾ (ಅಗರ್ತಲಾ)
ಏಪ್ರಿಲ್ 23: ನಾಲ್ಕನೇ ಶನಿವಾರ
ಏಪ್ರಿಲ್ 24: ಭಾನುವಾರ
ಏಪ್ರಿಲ್ 29: ಶಬ್-ಎ-ಕದರ್ (ಜಮ್ಮು ಮತ್ತು ಶ್ರೀನಗರ)












































