
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ, ಇಂಡಿಯನ್ ಸೂಪರ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಬುಧವಾರದಂದು ಭಾರತದಲ್ಲಿ 17 ಕೋಟಿ ಸಂಪಾದಿಸುವ ಮೂಲಕ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಅದರ ಒಟ್ಟು ಗಳಿಕೆಯ ಮೊತ್ತವನ್ನು ರೂ. 812 ಕೋಟಿ ರೂ.ಗಳಿಗೆ ಹೆಚ್ಚಿಸಿಕೊಂಡಿದೆ. ಕೇಜಿಎಫ್-2 800 ಕೋಟಿ ಗಳಿಸಿದ ಮೂರನೇ ಚಿತ್ರವಾಗಿದೆ.
ಭಾರತದಲ್ಲಿ 800 ಕೋಟಿ ರೂ. ಗಳಿಸಿದ ಚಿತ್ರವು ಆ ಬೌಂಡರಿಯನ್ನು ತಲುಪಲು ಕೇವಲ ಹದಿನಾಲ್ಕು ದಿನಗಳನ್ನು ತೆಗೆದುಕೊಂಡಿದ್ದು, ಈ ತಿಂಗಳ ಆರಂಭದಲ್ಲಿ ತೆರೆ ಕಂಡ ರಾಜಮೌಳಿ ಅವರ ಆರ್.ಆರ್.ಆರ್ ಸಿನೆಮಾ ತೆಗೆದುಕೊಂಡದ್ದಕ್ಕಿಂತ ಮೂರು ದಿನ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿ ಆರ್.ಆರ್.ಆರ್ ದಾಖಲೆಯನ್ನು ಉಡೀಸ್ ಮಾಡಿದೆ.
ಭಾರತೀಯ ಬಾಕ್ಸ್ ಆಫೀಸ್ ಮೇಲೆ ಕೆಜಿಎಫ್-2 ಸವರಿ ಈ ರೀತಿ ಇದೆ;
ವಾರ 1 – ರೂ. 623 ಕೋಟಿಗಳು (8 ದಿನಗಳು)
2 ನೇ ಶುಕ್ರವಾರ – ರೂ. 31 ಕೋಟಿ
2ನೇ ಶನಿವಾರ – ರೂ. 46 ಕೋಟಿ
2ನೇ ಭಾನುವಾರ – ರೂ. 55 ಕೋಟಿ
2ನೇ ಸೋಮವಾರ – ರೂ. 21 ಕೋಟಿ
2ನೇ ಮಂಗಳವಾರ – ರೂ. 19 ಕೋಟಿ
2ನೇ ಬುಧವಾರ – ರೂ. 17 ಕೋಟಿ
ಒಟ್ಟು – ರೂ. 812 ಕೋಟಿ
ಜಾಗತಿಕವಾಗಿ ಒಟ್ಟು ಕಲೆಕ್ಷನ್ ಮೊತ್ತ ರೂ. ಅಂದಾಜು 982 ಕೋಟಿ ಆಗಿದ್ದು 1,000 ಕೋಟಿ ನಾಲ್ಕು-ಅಂಕಿಯ ಮೈಲಿಗಲ್ಲನ್ನು ಇದೇ ಶುಕ್ರವಾರ ದಾಟುವ ನಿರೀಕ್ಷೆ ಇದೆ.
ಪ್ರಾಂತ್ಯವಾರು ಕಲೆಕ್ಷನ್ ಈ ರೀತಿ ಇದೆ ;
ಕರ್ನಾಟಕ – ರೂ. 146.50 ಕೋಟಿಗಳು
ಆಂಧ್ರ ಪ್ರದೇಶ/ತೆಲಂಗಾಣ – ರೂ. 135 ಕೋಟಿ
ತಮಿಳುನಾಡು – ರೂ. 80.50 ಕೋಟಿ
ಕೇರಳ – ರೂ. 53 ಕೋಟಿ
ಉತ್ತರ ಭಾರತ – ರೂ. 397 ಕೋಟಿಗಳು
ಒಟ್ಟು – ರೂ. 812 ಕೋಟಿ












































