HomeKarnatakaರಾಜ್ಯದಲ್ಲಿ ನಿಧಾನಗತಿಯಲ್ಲಿ ಕೊರೋನಾ ಏರಿಕೆ: ಬೆಂಗಳೂರಿನಲ್ಲಿ 127 ಸೇರಿ ರಾಜ್ಯದಲ್ಲಿ 133 ಹೊಸ ಕೇಸ್ ಪತ್ತೆ

ರಾಜ್ಯದಲ್ಲಿ ನಿಧಾನಗತಿಯಲ್ಲಿ ಕೊರೋನಾ ಏರಿಕೆ: ಬೆಂಗಳೂರಿನಲ್ಲಿ 127 ಸೇರಿ ರಾಜ್ಯದಲ್ಲಿ 133 ಹೊಸ ಕೇಸ್ ಪತ್ತೆ

ಬೆಂಗಳೂರು: ಕೋವಿಡ್ ನಾಲ್ಕನೇ ಅಲೆಯ ಭೀತಿ ದೇಶದಾದ್ಯಂತ ವ್ಯಾಪಿಸಿರುವ ನಡುವೆ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 127 ಸೇರಿದಂತೆ ರಾಜ್ಯದಲ್ಲಿ ಒಟ್ಟು 133 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಮುಂದಿನ ೩-೪ ವಾರಗಳಲ್ಲಿ ೫೦೦ ರಿಂದ ೧೦೦೦ ತನಕ ಪ್ರತಿ ದಿನ ಕೇಸುಗಳು ಕಂಡು ಬರುವ ಸೂಚನೆ ಸಿಕ್ಕಿದೆ.

ಇಂದು ರಾಜ್ಯದಲ್ಲಿ 147 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಸದ್ಯ 1,667 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ 1,737 ಸಕ್ರಿಯ ಪ್ರಕರಣಗಳಿವೆ.ಈಗ ಸೋಂಕಿನ ಪ್ರಮಾಣ ಶೇ. 1.16 ರಷ್ಟಿದ್ದು ಇಂದು 11, 415 ಟೆಸ್ಟಿಂಗ್ ನಡೆಸಲಾಗಿದೆ ಎಂದು ಅರೋಗ್ಯ ಸಚಿವ ಸುಧಾಕರ್ ಅವರು ಟ್ವಿಟ್ಟರ್ ಅಲ್ಲಿ ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments