
ಮನಿಲಾ: ಫಿಲಿಫೈನ್ಸ್ ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಕೂಟದಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಪಿವಿ ಸಿಂಧು ಚೀನಾದ ಹಿ ಬಿಂಗ್ ಕ್ಸಿಯಾವೊ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಷಿಪ್ ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಒಂದು ಗಂಟೆ 16 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಐದನೇ ಶ್ರೇಯಾಂಕದ ಚೀನಾದ ಆಟಗಾರ್ತಿಯನ್ನು 21-9, 13-21, 21-19 ಸೆಟ್‌ಗಳಿಂದ ಸೋಲಿಸಿದರು.
ಸೆಮಿ ಫೈನಲ್ ಪ್ರವೇಶಿಸರುವ ಪಿವಿ ಸಿಂಧು ಈ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಪದಕ ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಕೋವಿಡ್-19 ನಿಂದಾಗಿ ಈ ಕೂಟ ಎರಡು ವರ್ಷಗಳ ಕಾಲ ನಡೆದಿರಲಿಲ್ಲ.












































