
ಕೊಲ್ಲಂ/ಕೇರಳ: ಟೀನೇಜ್ ಯುವಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕೇರಳದ ಕ್ರೈಸ್ತ ಪಾದ್ರಿ ಒಬ್ಬನಿಗೆ ಕೇರಳ ಹೈಕೋರ್ಟ್ 18 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.ಆತನ ಮೇಲಿದ್ದ ಒಟ್ಟು ನಾಲ್ಕು ಪ್ರಕರಣಗಳಲ್ಲಿ, ಮೂರರಲ್ಲಿ ತಲಾ 5 ವರ್ಷ ಶಿಕ್ಷೆ, ನಾಲ್ಕನೇ ಪ್ರಕರಣದಲ್ಲಿ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಪ್ರತಿ ಪ್ರಕರಣದ ಸಂತ್ರಸ್ತನಿಗೂ 1 ಲಕ್ಷ ರೂಪಾಯಿ ಪರಿಹಾರ ನೀಡಲು ನ್ಯಾಯಾಧೀಶರು ಆದೇಶಿಸಿದ್ದಾರೆ.
ಕೇರಳದ ಕೊಲ್ಲಂನಲ್ಲಿ 2017 ರಲ್ಲಿ ಫಾದರ್ ಥಾಮ ಪರೆಕ್ಕುಲಮ್ (35) ಎಂಬ ಈ ಪಾದ್ರಿ ಅಂದು ಅಪ್ರಾಪ್ತರಾಗಿದ್ದ ನಾಲ್ವರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈತನ ವಿರುದ್ಧ ಪುಥೂರ್ ಪೊಲೀಸರು ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ)ರ ಅಡಿಯಲ್ಲಿ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಅಂದು ಲೈಂಗಿಕ ದೌರ್ಜನ್ಯದ ಘಟನೆ ನಡೆದಾಗ ಸೆಮಿನರಿ ವಿದ್ಯಾರ್ಥಿಗಳಾಗಿದ್ದ ನಾಲ್ವರು ಯುವಕರೂ 16 ವಯಸ್ಸಿನವರಾಗಿದ್ದರು. ಪಾದ್ರಿ ಅಂದು ರೆಕ್ಟಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ.













































