HomeNationalಗಲಭೆಗ್ರಸ್ತ ದಿವಾಳಿ ಶ್ರೀಲಂಕಾದಲ್ಲಿ ಬದಲಾವಣೆ ಪರ್ವ: ರಾನಿಲ್ ವಿಕ್ರಮಸಿಂಘೆ ನೂತನ ಪ್ರಧಾನಿಯಾಗಿ ನೇಮಕ

ಗಲಭೆಗ್ರಸ್ತ ದಿವಾಳಿ ಶ್ರೀಲಂಕಾದಲ್ಲಿ ಬದಲಾವಣೆ ಪರ್ವ: ರಾನಿಲ್ ವಿಕ್ರಮಸಿಂಘೆ ನೂತನ ಪ್ರಧಾನಿಯಾಗಿ ನೇಮಕ

ಕೊಲಂಬೊ: ಆರ್ಥಿಕವಾಗಿ ದಿವಾಳಿಯಾಗಿರುವ, ಸಾಲದ ಸುಳಿಗೆ ಸಿಲುಕಿ ನಲುಗಿ ಹೋಗಿರುವ, ಗಲಭೆಗ್ರಸ್ತ ಶ್ರೀಲಂಕಾದಲ್ಲಿ ರಾಜಕೀಯ ಬದಲಾವಣೆ ಪರ್ವ ಆರಂಭಗೊಂಡಿದೆ. ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರೆಯುತ್ತಿರುವ ಮಧ್ಯೆಯೇ ವಿರೋಧ ಪಕ್ಷದ ನಾಯಕ ರಾನಿಲ್ ವಿಕ್ರಮಸಿಂಘೆ ಅವರು ಲಂಕಾದ ನೂತನ ಪ್ರಧಾನಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.

ದೇಶವನ್ನು ಆರ್ಥಿಕ ದಿವಾಳಿತನಕ್ಕೆ ದೂಡಿದಕ್ಕಾಗಿ ತೀವ್ರ ಪ್ರತಿಭಟನೆ ಎದುರಿಸಿದ್ದ ಹಿಂದಿನ ಪ್ರಧಾನಿ ಮಹಿಂದ ರಾಜಪಕ್ಸೆ ಅವರು ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯ ಕೆಲವು ದಿನಗಳ ನಂತರ ಮಾಜಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ನೂತನ ಪ್ರಧಾನಿಯಾಗಿ ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರು ನೇಮಕ ಮಾಡಿದ್ದಾರೆ. 73 ವರ್ಷದ ರಾನಿಲ್ ವಿಕ್ರಮಸಿಂಘೆ ಅವರು ಶ್ರೀಲಂಕಾವನ್ನು ಮೇಲೆತ್ತುವಲ್ಲಿ ಸಫಲರಾಗುತ್ತಾರೋ ಕಾದು ನೋಡಬೇಕಾಗಿದೆ.

ಇದೊಂದು ಸರ್ವ ಪಕ್ಷೀಯರ ಸರ್ಕಾರವಾಗಿದ್ದು ಪ್ರಧಾನಿಯವರಿಗೆ ಆಡಳಿತಾರೂಢ ಪಕ್ಷದ ಬೆಂಬಲ ಕೂಡ ದೊರಕಿದೆ. ಈ ಹಿಂದೆ ನಾಲ್ಕು ಬಾರಿ ಶ್ರೀಲಂಕಾದ ಪ್ರಧಾನಿಯಾಗಿ ವಿಕ್ರಮಸಿಂಘೆ ಸೇವೆ ಸಲ್ಲಿಸಿದ್ದರು. ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನಾ(ಎಸ್‌ಎಲ್‌ಪಿಪಿ), ಪ್ರಮುಖ ವಿರೋಧ ಪಕ್ಷವಾದ ಸಮಗಿ ಜನ ಬಲವೇಗಯ(ಎಸ್‌ಜೆಬಿ) ವಿಕ್ರಮ ಸಿಂಘೆ ಅವರಿಗೆ ಬೆಂಬಲ ಸೂಚಿಸಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments