HomeNationalಇನ್ನು ಮುಂದೆ ಹೊಸ ಮದರಸಾಗಳಿಗಿಲ್ಲ ಧನಸಹಾಯ: ಅನುದಾನ ಪಟ್ಟಿಯಿಂದ ಹೊರಗಿಟ್ಟ ಸರ್ಕಾರ

ಇನ್ನು ಮುಂದೆ ಹೊಸ ಮದರಸಾಗಳಿಗಿಲ್ಲ ಧನಸಹಾಯ: ಅನುದಾನ ಪಟ್ಟಿಯಿಂದ ಹೊರಗಿಟ್ಟ ಸರ್ಕಾರ

ಲಕ್ನೋ: ಉತ್ತರ ಪ್ರದೇಶದಲ್ಲಿ ಹೊಸ ಮದರಸಾಗಳನ್ನು ಅನುದಾನ ಪಟ್ಟಿಯಿಂದ ಹೊರಗಿಡುವ ಪ್ರಸ್ತಾಪಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದ್ದು ಈ ಮೂಲಕ ಹೊಸ ಮದರಸರಗಳಿಗೆ ಸಿಗುತ್ತಿದ್ದ ಧನಸಹಾಯ ನಿಲ್ಲಲಿದೆ.

ಈ ಹಿಂದೆ ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್ ಸರ್ಕಾರವಿದ್ದಾಗ ತಂದಿದ್ದ ನೀತಿಯನ್ನು ಯೋಗಿ ಆದಿತ್ಯನಾಥ್ ಸರಕಾರ ಹಿಂಪಡೆದಿದೆ. ಉತ್ತರಪ್ರದೇಶದ ಎಲ್ಲ ಮದರಸಾಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗು ಶಿಕ್ಷಕರು ತರಗತಿಗಳನ್ನು ಪ್ರಾರಂಭಿಸುವ ಮೊದಲು ರಾಷ್ಟ್ರಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಿದ ಒಂದು ವಾರದೊಳಗೆ ಹೊಸ ಮದರಸಾಗಳಿಗೆ ಧನಸಹಾಯ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಕೇವಲ ಒಂದು ವರ್ಗವನ್ನು ಓಲೈಸುತ್ತಿದ್ದ ಸರ್ಕಾರದ ಯೋಜನೆಯನ್ನು ಕೈಬಿಟ್ಟಂತಾಗಿದೆ.

ಉತ್ತರ ಪ್ರದೇಶದ ಯೋಗಿ ಸರ್ಕಾರ ಕಳೆದ ಬಾರಿ ತನ್ನ ಕೊನೆಯ ಬಜೆಟ್ ನಲ್ಲಿ, ಮದರಸಾ ಆಧುನೀಕರಣ ಯೋಜನೆಯಡಿಯಲ್ಲಿ 479 ಕೋಟಿ ರೂ.ಗಳನ್ನು ವಿನಿಯೋಗಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments