HomeNationalದೆಹಲಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರ ಧ್ವಜದ ಮೇಲೆ ನಮಾಜ್: ಅಸ್ಸಾಂ ವ್ಯಕ್ತಿಯ ಬಂಧನ

ದೆಹಲಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರ ಧ್ವಜದ ಮೇಲೆ ನಮಾಜ್: ಅಸ್ಸಾಂ ವ್ಯಕ್ತಿಯ ಬಂಧನ

ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ತ್ರಿವರ್ಣ ಧ್ವಜವನ್ನು ನೆಲದಲ್ಲಿ ಹರಡಿ ಅದರ ಮೇಲೆ ನಿಂತು ನಮಾಜ್ ಮಾಡಿದಕ್ಕಾಗಿ ಅಸ್ಸಾಂನ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮೇ 8 ರಂದು ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಮೊಹಮ್ಮದ್ ತಾರಿಕ್ ಅಜೀಜ್ ಎಂದು ಗುರುತಿಸಲಾಗಿದೆ. ಸಿಸಿಟಿವಿ ಫೂಟೇಜ್ ಆಧಾರದಲ್ಲಿ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸೈನಿಕರೊಬ್ಬರು ಈ ಮಹಮ್ಮದ್ ತಾರಿಕ್ ಅಜೀಜ್ ನೆಲದ ಮೇಲೆ ರಾಷ್ಟ್ರಧ್ವಜವನ್ನು ಹರಡಿ ನಮಾಜ್ ಮಾಡುತ್ತಿದ್ದುದನ್ನು ನೋಡಿದ್ದರು. ಅನುಮಾನಾಸ್ಪದ ಚಟುವಟಿಕೆಗಳ ಹಿನ್ನೆಲೆಯಲ್ಲಿ ತಾರಿಕ್ ಅಜೀಜ್ ಅವರನ್ನು ಸಿಐಎಸ್ಎಫ್ ವಶಕ್ಕೆ ಪಡೆದಿದ್ದು, ನಂತರ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.

ದೆಹಲಿ ಪೊಲೀಸರು ಸಿಸಿಟಿವಿಯನ್ನು ಸ್ಕ್ಯಾನ್ ಮಾಡಿದ ನಂತರ ಮತ್ತು ಸಿಐಎಸ್ಎಫ್ ದೂರಿನ ಮೇರೆಗೆ ಮೊಹಮ್ಮದ್ ತಾರಿಕ್ ಅಜೀಜ್ ವಿರುದ್ಧ ರಾಷ್ಟ್ರೀಯ ಗೌರವದ ಅವಮಾನ ಕಾಯ್ದೆ 1971 ರ ಯು/ಎಸ್ 2 ತಡೆಗಟ್ಟುವಿಕೆಯ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಯಲ್ಲಿ ಮೊಹಮ್ಮದ್ ತಾರಿಕ್ ಅಜೀಜ್ ಬೋರ್ಡಿಂಗ್ ಗೇಟ್ ಸಂಖ್ಯೆ 1 ಮತ್ತು 3 ರ ನಡುವೆ ರಾಷ್ಟ್ರಧ್ವಜವನ್ನು ಹರಡಿ ನೆಲದ ಮೇಲೆ ನಿಂತು ನಮಾಜ್ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿತ್ತು.

ಮೊಹಮ್ಮದ್ ತಾರಿಕ್ ಅಜೀಜ್ ನನ್ನು ಬಂಧಿಸಲಾಗಿದ್ದು, ಆತನ ಪಾಸ್ ಪೋರ್ಟ್ ಸೇರಿದಂತೆ ಎಲ್ಲಾ ಪ್ರಯಾಣ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಆದರೆ, ಆತ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರ ಬಂದಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments