HomeNational1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ನಡೆದಂತೆ ಈಗ ನಡೆಯುತ್ತಿದೆ: ಅರವಿಂದ್ ಕೇಜ್ರಿವಾಲ್

1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ನಡೆದಂತೆ ಈಗ ನಡೆಯುತ್ತಿದೆ: ಅರವಿಂದ್ ಕೇಜ್ರಿವಾಲ್

ಹೊಸದಿಲ್ಲಿ: ಕಣಿವೆಯಲ್ಲಿ ಇತ್ತೀಚಿಗೆ ನಡೆಯುತ್ತಿರುವ ಹಲವು ಕಾಶ್ಮೀರಿ ಪಂಡಿತರ ಹತ್ಯೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಅವರಿಗೆ ಸೂಕ್ತ ಭದ್ರತೆ ನೀಡಬೇಕು ಮತ್ತು ಅವರ ಧ್ವನಿಯನ್ನುಹತ್ತಿಕ್ಕಬಾರದು ಎಂದು ಒತ್ತಾಯಿಸಿದ್ದಾರೆ. ಭಯೋತ್ಪಾದಕ ಶಕ್ತಿಗಳು ಜಮ್ಮುವಿನಲ್ಲಿ ಕೋಮು ಸೌಹಾರ್ದವನ್ನು ಬಯಸುವುದಿಲ್ಲ ಎಂದು ಕೇಜ್ರೀವಾಲ್ ಹೇಳಿದರು

“ಈ ವರ್ಷ 16 ಕಾಶ್ಮೀರಿ ಪಂಡಿತರನ್ನು ಕೊಲ್ಲಲಾಗಿದೆ. ಕಾಶ್ಮೀರಿ ಪಂಡಿತರಿಗೆ ಸೂಕ್ತ ಭದ್ರತೆ ನೀಡಬೇಕು ಮತ್ತು ಅವರ ಧ್ವನಿಯನ್ನು ಹತ್ತಿಕ್ಕಬಾರದು ಎಂದು ನಾನು ಒತ್ತಾಯಿಸುತ್ತೇನೆ. ಅವರು ತಮ್ಮ ‘ಜನ್ಮಭೂಮಿ’ಯಲ್ಲಿ ತಮ್ಮ ಮನೆಗಳನ್ನು ಸ್ಥಾಪಿಸಲು ಅವಕಾಶ ನೀಡಬೇಕು” ಎಂದು ಕೇಜ್ರೀವಾಲ್ ಒತ್ತಾಯಿಸಿದರು.

“ಕಾಶ್ಮೀರದಲ್ಲಿ ನೆಲೆಸಲು ಕಾಶ್ಮೀರ ಪಂಡಿತರಿಗೆ ಸಹಾಯ ಮಾಡಲು ಕೇಂದ್ರಕ್ಕೆ ಇದು ನನ್ನ ಮನವಿಯಾಗಿದೆ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಮತ್ತು ನಾವು ಯಾವುದೇ ಪಾತ್ರವನ್ನು ವಹಿಸಲು ಸಿದ್ಧರಿದ್ದೇವೆ” ಎಂದು ಅವರು ಹೇಳಿದರು.

ಕುಲ್ಗಾಮ್‌ನಲ್ಲಿ ಹಿಂದೂ ಶಾಲಾ ಶಿಕ್ಷಕಿಯ ಹತ್ಯೆಯ ವಿರುದ್ಧ ಪ್ರತಿಭಟನೆಗಳು ಜಮ್ಮು ಕಾಶ್ಮೀರದ ಜಮ್ಮು, ಸಾಂಬಾ ಮತ್ತು ಕಥುವಾ ಜಿಲ್ಲೆಗಳ ಹಲವು ಭಾಗಗಳಲ್ಲಿ ಬುಧವಾರ ಸತತ ಎರಡನೇ ದಿನವೂ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments