HomePoliticalಕಾಂಗ್ರೆಸ್ ತೊರೆದ ಒಂದೇ ವಾರದಲ್ಲಿ ಬಿಜೆಪಿ ಸೇರಿದ ಗುಜರಾತ್ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್

ಕಾಂಗ್ರೆಸ್ ತೊರೆದ ಒಂದೇ ವಾರದಲ್ಲಿ ಬಿಜೆಪಿ ಸೇರಿದ ಗುಜರಾತ್ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್

ಅಹಮದಾಬಾದ್: ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದಿದ್ದ ಗುಜರಾತ್ ಕಾಂಗ್ರೆಸ್ಸಿನ ಕಾರ್ಯಾಧ್ಯಕ್ಷ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಗುಜರಾತ್ ಚುನಾವಣೆಗೆ 6 ತಿಂಗಳು ಬಾಕಿ ಇರುವಾಗ ಇಂದು ಬಿಜೆಪಿ ಸೇರಿದ್ದಾರೆ. ಗುಜರಾತ್‌ನ ಗಾಂಧಿನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ 28 ವರ್ಷದ ಹಾರ್ದಿಕ್ ಪಟೇಲ್ ಅವರನ್ನು ಕೇಸರಿ ಶಾಲು ಹಾಗು ಕೇಸರಿ ಟೋಪಿ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಲಾಯಿತು.

ಬಿಜೆಪಿ ಪಕ್ಷಕ್ಕೆ ಸೇರುವ ಮೊದಲು ಹಾರ್ದಿಕ್ ಪಟೇಲ್ ಅವರು ಇಂದು ಬೆಳಿಗ್ಗೆ, “ಹೊಸ ಅಧ್ಯಾಯವನ್ನು ಪ್ರಾರಂಭಿಸುವ” ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ “ಸಣ್ಣ ಸೈನಿಕ” ಆಗಿ ಕೆಲಸ ಮಾಡುವ ಬಗ್ಗೆ ಟ್ವೀಟ್ ಮಾಡಿದ್ದರು.

“ರಾಷ್ಟ್ರೀಯ, ಪ್ರಾದೇಶಿಕ ಮತ್ತು ಸಾಮಾಜಿಕ ಹಿತಾಸಕ್ತಿಯ ಭಾವನೆಗಳೊಂದಿಗೆ ನಾನು ರಾಜಕೀಯದ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಸೇವೆಯ ಬೃಹತ್ ಕಾರ್ಯದಲ್ಲಿ ನಾನು ಒಬ್ಬ ಸಣ್ಣ ಸೈನಿಕನಾಗಿ ಕೆಲಸ ಮಾಡುತ್ತೇನೆ” ಎಂದು ಅವರು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಒಂದು ಕಡೆ ಹಾರ್ದಿಕ ಪಟೇಲನ ರಾಷ್ಟ್ರವಾದ ವಿರೋಧಿ ಧೋರಣೆಗಳ ಕಾರಣ ಆತನನ್ನು ಕಡುವಾಗಿ ದ್ವೇಷಿಸುತ್ತಿದ್ದ ಶಿಸ್ತಿನ ಪಕ್ಷ ಎಂದೇ ಕರೆಸಿಕೊಳ್ಳುತ್ತಿದ್ದ ಬಿಜೆಪಿ, ಮತ್ತೊಂದೆಡೆ ಬಿಜೆಪಿ ನೆರಳು ಕಂಡರೂ ಬುಸುಗುಡುತ್ತಿದ್ದ ಹಾರ್ದಿಕ್ ಪಟೇಲ್ ಜತೆಯಾಗಿರುವುದು ತಳಮಟ್ಟದ ಕಾರ್ಯಕರ್ತರಿಗೆ ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು, ನಮ್ಮ ವಾಟ್ಸಾಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments