HomeNationalಬಂಗಾಳದಲ್ಲಿ ಮುಂದುವರೆದ ಹಿಂಸಾಚಾರ, ವಾಹನ ಮನೆಗಳಿಗೆ ಬೆಂಕಿ : 60 ಬಂಧನ

ಬಂಗಾಳದಲ್ಲಿ ಮುಂದುವರೆದ ಹಿಂಸಾಚಾರ, ವಾಹನ ಮನೆಗಳಿಗೆ ಬೆಂಕಿ : 60 ಬಂಧನ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೈಗಾರಿಕಾ ಜಿಲ್ಲೆಯಾದ ಹೌರಾ ಹಾಗು ಮುರ್ಷಿದಾಬಾದ್ ಜಿಲ್ಲೆಯ ಕೆಲವು ಭಾಗ ಮತ್ತು ದಕ್ಷಿಣ 24 ಪರಗಣಗಳಲ್ಲಿ ಮತ್ತೆ ಹಿಂಸಾಚಾರ ನಡೆದಿದ್ದು ಹಲವು ವಾಹನ ಹಾಗು ಕೆಲ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರ ನಿರತ ಕನಿಷ್ಠ 60 ಜನರನ್ನು ಬಂಧಿಸಲಾಗಿದೆ.

ಹೌರಾ ಜಿಲ್ಲೆಯ ಪಂಚಲಾ ಬಜಾರ್ ಪ್ರದೇಶದಲ್ಲಿ ಶನಿವಾರ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು ಮತ್ತು ವಾಹನಗಳಿಗೆ, ಮನೆಗಳಿಗೆ ಬೆಂಕಿ ಹಚ್ಚಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಲ್ಲು ತೂರಾಟದಿಂದಾಗಿ ಹಲವು ಪೊಲೀಸರಿಗೆ ಗಾಯಗಳಾಗಿದೆ. ಈ ಮಧ್ಯೆ ಹೌರಾ ಜಿಲ್ಲೆಯ ಬಿಜೆಪಿ ಕಚೇರಿಯನ್ನು ಮತಾಂಧರು ಧ್ವಂಸಗೊಳಿಸಿದ್ದಾರೆ.

ಹಿಂಸಾಚಾರ ನಿರಂತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ಹೌರಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕನಿಷ್ಠ 60 ಜನರನ್ನು ಬಂಧಿಸಲಾಗಿದ್ದು ಗಲಭೆ, ಕೊಲೆ ಯತ್ನ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments