HomeCoastalಬಂಟ್ವಾಳ-ಸಿದ್ದಕಟ್ಟೆ: ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

ಬಂಟ್ವಾಳ-ಸಿದ್ದಕಟ್ಟೆ: ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

ಬಂಟ್ವಾಳ: ಟಿಪ್ಪರ್ ಚಾಲಕನ ಅಜಾರೂಕತೆಯ ಚಾಲನೆಗೆ ಬೈಕ್ ಸವಾರರಿಬ್ಬರು ತಮ್ಮ ಜೀವವನ್ನು ಕಳೆದುಕೊಂಡು ಘಟನೆ ಇಂದು ಸಂಜೆ ಬಂಟ್ವಾಳದ ಸಿದ್ದಕಟ್ಟೆ ಸಮೀಪದ ಸೊರ್ನಾಡು ಎಂಬಲ್ಲಿ ನಡೆದಿದೆ. ಬೈಕ್ ಸವಾರರಾದ ಲೊರೇಟೋ ಕಮಲಕಟ್ಟೆ ನಿವಾಸಿ ನಿತಿನ್ ಹಾಗು ಶಶಿರಾಜ್ ಸ್ಥಳದಲ್ಲೇ ಸಾವಿಗೀಡಾದ ದುರ್ದೈವಿಗಳು.

ಮೃತರು ಸಿದ್ದಕಟ್ಟೆಯಿಂದ ಬಿಸಿರೋಡು ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಸೊರ್ನಾಡು ಸಮೀಪ ವೇಗವಾಗಿ ಬಂದ ಟಿಪ್ಪರ್ ಲಾರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತರಾಗಿದ್ದಾರೆ.

ಅಪಘಾತ ನಡೆದ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಲು ಯತ್ನಿಸಿದ್ದು ಸ್ಥಳೀಯರು ಬೆನ್ನಟ್ಟಿ ಹಿಡಿದ್ದಾರೆ. ಘಟನೆಗೆ ಟಿಪ್ಪರ್ ಚಾಲಕನ ಅಜಾರೂಕ ಚಾಲನೆಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments