HomeCoastalಬಂಟ್ವಾಳ-ಮಾಣಿ: ವಿವಾಹಿತ ಮಹಿಳೆಯ ಮೇಲೆ ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಧಾಳಿ, ಮಹಿಳೆ ಸಾವು

ಬಂಟ್ವಾಳ-ಮಾಣಿ: ವಿವಾಹಿತ ಮಹಿಳೆಯ ಮೇಲೆ ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಧಾಳಿ, ಮಹಿಳೆ ಸಾವು

ಬಂಟ್ವಾಳ/ಮಾಣಿ: ವಿವಾಹಿತ ಮಹಿಳೆಯೊಬ್ಬಳ ಮೇಲೆ ನಡುರಸ್ತೆಯಲ್ಲೇ ಆಟೋ ಚಾಲಕನೊಬ್ಬ ಮಾರಕಾಸ್ತ್ರಗಳಿಂದ ಧಾಳಿ ನಡೆಸಿದ ಪರಿಣಾಮ ಮಹಿಳೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದ ಘಟನೆ ಬಂಟ್ವಾಳ್ ತಾಲೂಕಿನ ಮಾಣಿ ಸಮೀಪದ ನೆರಳಕಟ್ಟೆಯಲ್ಲಿ ನಡೆದಿದೆ.

ಮೃತರನ್ನು ಮಾಣಿ ನಿವಾಸಿ ದಿವಂಗತ ತ್ಯಾಂಪ ಪೂಜಾರಿಯವರ ಮಗಳು, ಈಗ ಮದುವೆಯಾಗಿ ಅನಂತಾಡಿಯ ದೇವಿನಗರದಲ್ಲಿ ವಾಸಿಸುತ್ತಿರುವ ಶಕುಂತಲ (35) ಎಂದು ಗುರುತಿಸಲಾಗಿದೆ.

ಇಂದು ಸಂಜೆ (ಸೋಮವಾರ) ಬಂಟ್ವಾಳ ತಾಲೂಕಿನ ಪುತ್ತೂರು ಬಿಸಿರೋಡ್ ರಸ್ತೆಯ ಮಾಣಿ ಬಳಿಯ ನೇರಳಕಟ್ಟೆಯ ‘ಜನಪ್ರಿಯ ಹಾಲ್’ ಬಳಿ ಶಕುಂತಾಳ ಪರಿಚಯಸ್ಥ ಆಟೋರಿಕ್ಷಾದವನ ಜೊತೆ ತನ್ನ ಸ್ಕೂಟರ್ ಅನ್ನು ನಿಲ್ಲಿಸಿ ಮಾತನಾಡುತ್ತಿದ್ದರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಆಟೋ ಚಾಲಕ ಈಕೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರಿಕ್ಷಾದೊಂದಿಗೆ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಕುಂತಲ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವಿಗೀಡಾಗಿದ್ದಾರೆ. ಆಟೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಮೃತ ಶಕುಂತಳಾ ಅವರು ಪುತ್ತೂರಿನಲ್ಲಿ ತನ್ನ ಪತಿಯೊಂದಿಗೆ ಕ್ಯಾಂಟಿನ್‌ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ತನಿಖೆ ಪ್ರಗತಿಯಲ್ಲಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments