HomeNationalಇಂಗ್ಲೆಂಡ್ ಪ್ರಧಾನಿ ಆಗುತ್ತಾರಾ ಇನ್ಫೋಸಿಸ್ ಮೂರ್ತಿ ಅಳಿಯ?:ಬೋರಿಸ್ ರಾಜಿನಾಮೆ ಬೆನ್ನಲ್ಲೇ ರಿಷಿ ಹೆಸರು ಮುನ್ನಲೆಗೆ

ಇಂಗ್ಲೆಂಡ್ ಪ್ರಧಾನಿ ಆಗುತ್ತಾರಾ ಇನ್ಫೋಸಿಸ್ ಮೂರ್ತಿ ಅಳಿಯ?:ಬೋರಿಸ್ ರಾಜಿನಾಮೆ ಬೆನ್ನಲ್ಲೇ ರಿಷಿ ಹೆಸರು ಮುನ್ನಲೆಗೆ

ಲಂಡನ್: ಕಳೆದ ಒಂದು ವರ್ಷದಿಂದ ಬೀರ್ತಾನ್ ಪ್ರಧಾನಿ ರಾಜೀನಾಮೆಗೆ ಕೇಳಿ ಬಂದ ಒತ್ತಡ ನಿರ್ಣಾಯಕ ಹಂತ ತಲುಪಿದ್ದು ಇದೀಗ ಸಂಪುಟ ಸಚಿವರ ಸರಣಿ ರಾಜಿನಾಮೆ ಬೆನ್ನಲ್ಲೇ ಪ್ರಧಾನಿ ಹುದ್ದೆಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ರಾಜಿನಾಮೆ ನೀಡಿದ್ದಾರೆ. ಅಕ್ಟೋಬರ್‌ನಲ್ಲಿ ಕನ್ಸರ್ವೇಟಿವ್ ಪಕ್ಷದ ಸಮಾವೇಶದಲ್ಲಿ ಹೊಸ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ನಡೆಯಲಿದ್ದು ಅಲ್ಲಿಯವರೆಗೆ 58 ವರ್ಷದ ಬೋರಿಸ್ ಜಾನ್ಸನ್ ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಬೋರಿಸ್ ನಿರ್ಗಮನದ ಬೆನ್ನಲ್ಲೇ ಮುಂದಿನ ಪ್ರಧಾನಿ ಹುದ್ದೆ ರೇಸ್ ನಲ್ಲಿ ಭಾರತ ಮೂಲದ ರಿಷಿ ಸುನಕ್ ಸೇರಿದಂತೆ ಹಲವರ ಹೆಸರು ಮುಂಚೂಣಿಯಲ್ಲಿದ್ದಾರೆ. ರಿಷಿ ಅವರು ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ಆಗಿದ್ದಾರೆ. ಈ ಹಿಂದೆಯೂ ಬೋರಿಸ್ ರಾಜೀನಾಮೆ ನೀಡುವಂತೆ ಒತ್ತಡ ಹೆಚ್ಚಾಗಿದ್ದಾಗ ಕೂಡ ರಿಷಿ ಸುನಕ್ ಅವರ ಹೆಸರು ಕೇಳಿ ಬಂದಿತ್ತು. ಇದೀಗ ಮತ್ತೆ ರಿಷಿ ಹೆಸರು ಮುನ್ನೆಲೆಗೆ ಬಂದಿದೆ. ಬ್ರಿಟನ್ ನ ಮೊದಲ ಹಿಂದೂ ವೈಸ್ ಚಾನ್ಸಿಲರ್ ಆಗಿದ್ದ 42 ವರ್ಷದ ರಿಷಿ ಸುನಕ್ ಒಂದು ವೇಳೆ ಪ್ರಧಾನಿ ಹುದ್ದೆ ಅಲಂಕರಿಸಿದರೆ ಬ್ರಿಟನ್ನಿನ ಮೊದಲ ಹಿಂದೂ ಹಾಗು ಮೊದಲ ಭಾರತೀಯ ಮೂಲದ ಪ್ರಧಾನಿಯಾಗಲಿದ್ದಾರೆ.

ಪ್ರಧಾನಿ ರೇಸ್ ನಲ್ಲಿ ರಿಷಿ ಸುನಕ್ ಜತೆಗೆ ಜೆರೆಮಿ ಹಂಟ್, ಲಿಜ್ ಟ್ರಸ್, ಸಾಜಿದ್ ಜಾವಿದ್, ಬೆನ್ ವ್ಯಾಲೇಸ್, ನಾದಿಮ್ ಜಹಾವಿ, ಟಾಮ್ ತುಗೆಂಧತ್, ಪೆನ್ನಿ ಮೊರ್ಡಾಂಟ್ ಮತ್ತು ಡೊಮಿನಿಕ್ ರಾಬ್ ಅವರ ಹೆಸರುಗಳು ಕೂಡ ಚಾಲ್ತಿಯಲ್ಲಿವೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments