HomeNationalಶ್ರೀಲಂಕಾ ಬಿಕ್ಕಟ್ಟು: ಅಧ್ಯಕ್ಷ ರಾಜಪಕ್ಸೆ ದೇಶ ಬಿಟ್ಟು ಪರಾರಿ, ಪ್ರಧಾನಿ ವಿಕ್ರಮಸಿಂಘೆ ರಾಜೀನಾಮೆ, ಪ್ರಧಾನಿ...

ಶ್ರೀಲಂಕಾ ಬಿಕ್ಕಟ್ಟು: ಅಧ್ಯಕ್ಷ ರಾಜಪಕ್ಸೆ ದೇಶ ಬಿಟ್ಟು ಪರಾರಿ, ಪ್ರಧಾನಿ ವಿಕ್ರಮಸಿಂಘೆ ರಾಜೀನಾಮೆ, ಪ್ರಧಾನಿ ಮನೆಗೆ ಬೆಂಕಿ

ಕೊಲಂಬೊ: ಲಂಕಾ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಹದಗೆಟ್ಟು ಸರಿಪಡಿಸಲಾಗದ ಮಟ್ಟಕ್ಕೆ ಹೋಗಿದ್ದು ಇದೀಗ ಅಲ್ಲಿನ ಅಧ್ಯಕ್ಷ ಗೊಟಬಯ ರಾಜಪಕ್ಷೆ ಉದ್ರಿಕ್ತ ಜನರ ಪ್ರತಿಭಟನೆಗೆ ಹೆದರಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಪ್ರಸ್ತುತ ಅವರು ನೌಕಾಪಡೆಯ ಹಡಗಿನಲ್ಲಿ ಸಮುದ್ರದ ಯಾವುದೋ ಪ್ರದೇಶದಲ್ಲಿ ಇದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಇತ್ತೀಚಿಗೆ ನೇಮಿಸಲ್ಪಟ್ಟ ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ನಂತರ ಉದ್ರಿಕ್ತ ಲಂಕಾ ಪ್ರತಿಭಟನಾಕಾರರ ಗುಂಪು ವಿಕ್ರಮ ಸಿಂಘೆ ಮನೆಗೆ ಬೆಂಕಿ ಹಚ್ಚಿದೆ.

ಮತ್ತೊಂದೆಡೆ ತೀವ್ರ ಭದ್ರತೆಯ ಕೋಟೆ ಪ್ರದೇಶದಲ್ಲಿರುವ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ಅಧಿಕೃತ ನಿವಾಸಕ್ಕೆ ಶನಿವಾರ ಸಾವಿರಾರು ಉಗ್ರ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ದಾಟಿ ಮುತ್ತಿಗೆ ಹಾಕಿದರು. ಈ ಪ್ರತಿಭಟನಾಕಾರರು ದೇಶಾದ್ಯಂತ ಬಸ್‌ಗಳು, ರೈಲುಗಳು ಮತ್ತು ಟ್ರಕ್‌ಗಳಲ್ಲಿ ಆಗಮಿಸಿದ್ದರು.

ದ್ವೀಪ ರಾಷ್ಟ್ರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಅಧ್ಯಕ್ಷ ರಾಜಪಕ್ಸೆ ರಾಜೀನಾಮೆಗೆ ಪ್ರತಿಭಟನಾಕಾರರು ಒತ್ತಾಯಿಸಿದರು. ವರ್ಷಗಳ ಕಾಲ ಅಧಿಕಾರದಲ್ಲಿದ್ದ ರಾಜಪಕ್ಷೆ ಕುಟುಂಬ ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸಿ ಮತ್ತು ಚೀನಾದಿಂದ ಹೆಚ್ಚು ಸಾಲ ಪಡೆದು ದೇಶವನ್ನು ದಿವಾಳಿಯನ್ನಾಗಿಸಿದ್ದಾರೆ ಎಂದು ಪ್ರತಿಭಟನಾಕಾರರು ರೊಚ್ಚಿಗೆದ್ದಿದ್ದಾರೆ. ಲಂಕಾ ವಿದೇಶಿ ಕರೆನ್ಸಿಯ ಕೊರತೆಯನ್ನು ಎದುರಿಸುತ್ತಿದ್ದು ಮತ್ತು ಇಂಧನ, ಆಹಾರ ಮತ್ತು ಔಷಧದಂತಹ ಮೂಲಭೂತ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಹೆಣಗಾಡುತ್ತಿದೆ.

ಪ್ರತಿಭಟನಾಕಾರರು ಅಧ್ಯಕ್ಷರ ಭವನದ ಗೋಡೆಗಳನ್ನು ಹತ್ತಿ ಗುಂಡು ಹಾರಿಸಿದರು. ಆದರೆ ನಿವಾಸವನ್ನು ಅತಿಕ್ರಮಿಸುವುದನ್ನು ಪೊಲೀಸರಿಗೆ ತಡೆಯಲು ಸಾಧ್ಯವಾಗಲಿಲ್ಲ. ಪ್ರತಿಭಟನಾಕಾರರು ಅಧ್ಯಕ್ಷರ ಮನೆಯ ಹಾಸಿಗೆಗಳ ಮೇಲೆ ಮತ್ತು ಪೀಠೋಪಕರಣಗಳ ಮೇಲೆ ಕುಳಿತುಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಅಧ್ಯಕ್ಷರ ಮನೆಯ ಆವರಣದಲ್ಲಿರುವ ಈಜುಕೊಳದಲ್ಲಿ ಪ್ರತಿಭಟನಾಕಾರರು ಈಜಾಡುತ್ತಿರುವುದು ಕೂಡ ವೈರಲ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments