
ಮಂಗಳೂರು: ಇಂದು ರಾತ್ರಿ ಸುಮಾರು 8:30ರ ಸಮಯಕ್ಕೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಫಾಝಿಲ್ ಕೊಲೆಯ ಹಿಂದೆ ಹಲವು ಊಹಾಪೋಹಗಳು ಎದ್ದಿದ್ದು ಆರಂಭದಲ್ಲಿ ಹಣಕಾಸು ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿತ್ತು. ಆದರೆ ಇದೀಗ ವಾಟ್ಸಾಪ್ ಹಾಗು ಸೋಷಿಯಲ್ ಮೀಡಿಯಾಗಳಲ್ಲಿ ಫಾಝಿಲ್ ಕೊಲೆ ಕುರಿತು ಹಲವು ರೀತಿಯ ಮೆಸೇಜುಗಳು ಹರಿದಾಡುತ್ತಿವೆ.
ಈ ಕೊಲೆ ಶಿಯಾ ಸುನ್ನಿ ನಡುವಿನ ಸಂಘರ್ಷದ ಕೊಲೆ ಎಂಬ ಮೆಸೇಜು ಹರಿದಾಡುತ್ತಿದೆ. ಫಾಝಿಲ್ ಕೊಲೆಯ ಹಿಂದೆ ಪ್ರೇಮ ಪ್ರಕರಣ ಇದ್ದು ಶಿಯಾ ಪಂಗಡಕ್ಕೆ ಸೇರಿದ ಫಾಝಿಲ್ ಸುನ್ನಿ ಪಂಗಡಕ್ಕೆ ಸೇರಿದ ಯುವತಿಯನ್ನು ಪ್ರೀತಿಸುತ್ತಿದ್ದುದೇ ಈ ಕೊಲೆಗೆ ಕಾರಣ ಎಂಬ ರೀತಿಯ ಮೆಸೇಜು ಹರಿದಾಡುತ್ತಿದೆ.

ಒಟ್ಟಿನಲ್ಲಿ ತನಿಖೆ ಪ್ರಗತಿಯಲ್ಲಿದ್ದು ಈ ಕೊಲೆ ಕೋಮು ದ್ವೇಷದ ಕೊಲೆ ಅಲ್ಲ ಎಂಬುದು ಪೊಲೀಸರ ಆರಂಭಿಕ ತನಿಖೆಯಿಂದ ದೃಢಪಟ್ಟಿದೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































