HomeCoastalಕಾಸರಗೋಡು: ಮನೆಯ ಟೆರೇಸ್ ಮೇಲೆ ಗಾಂಜಾ ಕೃಷಿ ಮಾಡಿದ ಖದೀಮ ನಜೀಬ್ ಅರೆಸ್ಟ್

ಕಾಸರಗೋಡು: ಮನೆಯ ಟೆರೇಸ್ ಮೇಲೆ ಗಾಂಜಾ ಕೃಷಿ ಮಾಡಿದ ಖದೀಮ ನಜೀಬ್ ಅರೆಸ್ಟ್

ಕುಂಬಳೆ: ತಾನು ವಾಸವಿರುವ ಮನೆಯ ಟೆರೇಸ್ ಮೇಲೆ ಬಾಟಲ್ ಹಾಗು ಇನ್ನಿತರ ಸಾಧನಗಳನ್ನು ಬಳಸಿ ಮಣ್ಣು ತುಂಬಿಸಿ ಗಾಂಜಾ ಕೃಷಿ ಮಾಡಿದ ಖದೀಮ ಕೃಷಿಕನನ್ನು ಕಾಸರಗೋಡಿನ ಕುಂಬಳೆಯಲ್ಲಿ ಬಂಧಿಸಲಾಗಿದೆ. ಈತ ಮಂಗಳೂರಿನ ಕಾಲೇಜು ವಿದ್ಯಾರ್ಥಿಯಾಗಿದ್ದು ತನ್ನ ಸ್ವಂತ ಬಳಕೆಗಾಗಿ ಹಾಗು ಮಾರಾಟಕ್ಕಾಗಿ ಗಾಂಜಾ ಕೃಷಿ ಮಾಡಿದ್ದ.

ಕುಂಬಳೆಯ ಬೇಕೂರು ಕನ್ನಡಿ ಪಾರೆ ನಿವಾಸಿ 22 ವರ್ಷ ವಯಸ್ಸಿನ ನಜೀಬ್ ಮೆಹಪೂಜ್ ಬಂಧಿತ ಆರೋಪಿಯಾಗಿದ್ದು ಈತ ಕಿದೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಆ ಬಾಡಿಗೆ ಮನೆಯ ಟೆರೇಸ್ ಮೇಲೆ ಬಾಟಲ್ ಹಾಗು ಕ್ಯಾನ್ ನ ಮೇಲ್ಭಾಗ ಕತ್ತರಿಸಿ ಮಣ್ಣು ತುಂಬಿಸಿ ಗಾಂಜಾ ಗಿಡಗಳನ್ನು ಬೆಳೆಸಿದ್ದ.

ಈತ ಇಲ್ಲಿ ಗಾಂಜಾ ಬೆಳೆದು ಎಲ್ಲೆಲ್ಲಿ ಮಾರಾಟ ಮಾಡುತ್ತಿದ್ದ ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments