
ಮಂಗಳೂರು: ಮಂಗಳೂರಿನ ಸುರತ್ಕಲ್ ಬಳಿಯ ಎನ್ಐಟಿಕೆ ಬೀಚ್ ಬಳಿ ವಿಹಾರಕ್ಕೆಂದು ಬಂದಿದ್ದ ಜೋಡಿಯನ್ನು ಬೆದರಿಸಿ ಹುಡುಗನನ್ನು ಓದಿಸಿ ಹುಡುಗಿಯ ಮೇಲೆ ಲೈಂಗಿಕ ಶೋಷಣೆ ಮಾಡಿ, ಅದರ ವಿಡಿಯೋ ಮೂಲಕ ಬ್ಲಾಕ್ ಮೇಲ್ ಮಾಡುತ್ತಿದ್ದ ಲಾರಿ ಚಾಲಕನನ್ನ ಬಂಧಿಸಲಾಗಿದೆ.
ಬಂಧಿತನನ್ನು ಮುನಾಜ್ ಅಹ್ಮದ್ (30) ಎಂದು ಗುರುತಿಸಲಾಗಿದೆ. ಜುಲೈ ೨೭ರಂದು ಕಾಲೇಜಿನ ಜೋಡಿಯೊಂದು ಸುರತ್ಕಲ್ ಬೀಚಿಗೆ ಆಗಮಿಸಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾಗ ಅವರ ಕ್ರಿಯೆಗಳನ್ನು ಮೊಬೈಲ್ ನಲ್ಲಿ ಚಿತ್ರಿಸಿದ ವೃತ್ತಿಯಲ್ಲಿ ಮೀನು ಸಾಗಣೆ ಲಾರಿ ಚಾಲಕನಾಗಿರುವ ಮುನಾಜ್ ಅಹ್ಮದ್ ಬಳಿಕ ಅವರ ಬಳಿಗೆ ಹೋಗಿ ವಿಡಿಯೋ ತೋರಿಸಿ ಬೆದರಿಸಿ ಹುಡುಗನನ್ನು ಓಡಿಸಿದ್ದಾನೆ. ನಂತರ ಹುಡುಗಿಯನ್ನು ಲೈಂಗಿಕವಾಗಿ ಶೋಷಣೆ ಮಾಡಿ ಅದನ್ನು ಕೂಡ ವಿಡಿಯೋ ಮಾಡಿದ್ದಾನೆ.
ನಂತರ ಪ್ರತಿ ದಿನ ಬೆತ್ತಲೆ ಫೋಟೋ ಕಳಿಸುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದ ಈತನ ಮೇಲೆ ರೋಸಿ ಹೋದ ಯುವತಿ ಪೊಲೀಸ್ ಕೇಸು ದಾಖಲಿಸಿದ್ದಾಳೆ. ಈತ ಇದೇ ರೀತಿ ಬೇರೆಯವರಿಗೂ ಮಾಡಿರುವ ಸಾಧ್ಯತೆ ಇದ್ದು ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಮೊಬೈಲ್ ಫೋನ್ ಅನ್ನು ವಶಪಡಿಸಿ ಪರಿಶೀಲಿಸಲಾಗುತ್ತಿದೆ.
ಆರೋಪಿಯನ್ನು ಮತ್ತೆ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ, ಆತನ ಫೋನ್ ಅನ್ನು ಕೂಡ ಪರಿಶೀಲಿಸಿ ಬೇರೆ ಪ್ರಕರಣಗಳು ಇವೆಯೇ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ತಿಳಿಸಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































