HomeCoastalಮಂಗಳೂರು: ತಪ್ಪಿಸಲೆತ್ನಿಸಿದ ಕೊಲೆಯತ್ನ ಆರೋಪಿ ಮುಸ್ತಾಕ್ ಮೇಲೆ ಪೊಲೀಸ್ ಫೈರಿಂಗ್

ಮಂಗಳೂರು: ತಪ್ಪಿಸಲೆತ್ನಿಸಿದ ಕೊಲೆಯತ್ನ ಆರೋಪಿ ಮುಸ್ತಾಕ್ ಮೇಲೆ ಪೊಲೀಸ್ ಫೈರಿಂಗ್

ಮಂಗಳೂರು: ಕೊಲೆಯತ್ನ ಪ್ರಕರಣದಲ್ಲಿ ಆರೋಪಿ ಆಗಿದ್ದ ಮುಸ್ತಾಕ್ ಸ್ಥಳ ಪರಿಶೀಲನೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭ ಆತನ ಕಾಲಿಗೆ ಪೊಲೀಸ್ ಫೈರಿಂಗ್ ಮಾಡಿದ ಘಟನೆ ಮಂಗಳೂರಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಗಸ್ಟ್ 19ರಂದು ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪಿ ಮುಸ್ತಾಕ್ ಅಲಿಯಾಸ್ ಮಿಸ್ತಾನನ್ನ ಬಂಧಿಸಿದ್ದ ಪೊಲೀಸರು ಇಂದು ಸ್ಥಳ ಮಹಜರು ನಡೆಸಲು ಕರೆದುಕೊಂಡು ಹೋಗಿದ್ದರು. ಈ ಸಂದರ್ಭ ಮಿಸ್ತಾ ಅಲಿಯಾಸ್ ಮುಸ್ತಾಕ್ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆರೋಪಿ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಪೊಲೀಸರು ಆತನ ಕಾಲಿಗೆ ಫೈರಿಂಗ್ ಮಾಡಿ ಆತನನ್ನು ಹಿಡಿದ್ದಾರೆ. ಘಟನೆಯಲ್ಲಿ ಪೊಲೀಸರಿಗೂ ಕೂಡ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚಿಗೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡುವ ಘಟನೆ, ತಪ್ಪಿಸಿಕೊಳ್ಳುವ ಘಟನೆಗಳು ಹೆಚ್ಚಾಗಿದ್ದು ಪೊಲೀಸರು ಗುಂಡಿನ ಮೂಲಕ ಉತ್ತರ ಕೊಡುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments