HomeSportsಟಿ20 ವಿಶ್ವಕಪ್'ನಲ್ಲಿ ಮತ್ತೆ ಅಚ್ಚರಿಯ ಫಲಿತಾಂಶ: ಪಾಕಿಸ್ತಾನವನ್ನು ಪುಡಿಗಟ್ಟಿದ ಜಿಂಬಾಬ್ವೆಗೆ ರೋಚಕ 1 ರನ್ ಜಯ

ಟಿ20 ವಿಶ್ವಕಪ್’ನಲ್ಲಿ ಮತ್ತೆ ಅಚ್ಚರಿಯ ಫಲಿತಾಂಶ: ಪಾಕಿಸ್ತಾನವನ್ನು ಪುಡಿಗಟ್ಟಿದ ಜಿಂಬಾಬ್ವೆಗೆ ರೋಚಕ 1 ರನ್ ಜಯ

ಪರ್ತ್ : ಆಸ್ಟ್ರೇಲಿಯಾದ ಪರ್ತ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯಾವಳಿಯ ಪಾಕಿಸ್ತಾನ ಹಾಗು ಜಿಂಬಾಬ್ವೆ ತಂಡಗಳ ನಡುವಿನ ಹಣಾಹಣಿ ರೋಚಕವಾಗಿ ಅಂತ್ಯ ಕಂಡಿದ್ದು ಅಚ್ಚರಿಯ ಫಲಿತಾಂಶದಲ್ಲಿ ಜಿಂಬಾಬ್ವೆ ಪಾಕಿಸ್ತಾನವನ್ನು 1 ರನ್ನಿನಿಂದ ಸೋಲಿಸಿ ವಿಜಯದ ಕೇಕೆ ಹಾಕಿದೆ.

ಟಿ20 ವಿಶ್ವಕಪ್ 2022ರ ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ಪಾಕಿಸ್ತಾನಕ್ಕೆ ಒಂದು ರನ್‌ನಿಂದ ಆಘಾತ ನೀಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ 130/8 ಸ್ಕೋರ್ ಮಾಡಿತು. ಪಾಕಿಸ್ತಾನ ಪರ ಶಾನ್ ಮಸೂದ್ 38 ಎಸೆತಗಳಲ್ಲಿ 44 ರನ್ ಗಳಿಸಿ ಗರಿಷ್ಠ ಸ್ಕೋರ್ ಮಾಡಿದರು. ಆದರೆ ಪಂದ್ಯದ ಕೊನೆಯ ಎಸೆತದಲ್ಲಿ ಗೆಲುವಿಗೆ ಅಗತ್ಯವಿದ್ದ ಮೂರು ರನ್ ಗಳಿಸಲು ಪಾಕಿಸ್ತಾನ ವಿಫಲವಾಯಿತು. ಎರಡನೇ ರನ್ನಿಗಾಗಿ ಓಡುವ ಭರದಲ್ಲಿ ರನೌಟ್ ಆಗುವ ಮೂಲಕ ಪಂದ್ಯವನ್ನು ಟೈ ಮಾಡಿಕೊಳ್ಳುವ ಅವಕಾಶವನ್ನೂ ಪಾಕ್ ಕಳೆದುಕೊಂಡಿತು.

ಸಿಕಂದರ್ ರಜಾ 3/25 ರೊಂದಿಗೆ ಜಿಂಬಾಬ್ವೆ ಪರ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರ ಹೊಮ್ಮಿದರೆ, ಬ್ರಾಡ್ ಇವಾನ್ಸ್ 25 ರನ್‌ಗಳಿಗೆ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್‌:
ಜಿಂಬಾಬ್ವೆ: 20 ಓವರ್‌ಗಳಲ್ಲಿ 130/8 (ಸೀನ್ ವಿಲಿಯಮ್ಸ್ 31; ಶಾದಾಬ್ ಖಾನ್ 3/23, ಮೊಹಮ್ಮದ್ ವಾಸಿಮ್ 4/24 ).

ಪಾಕಿಸ್ತಾನ: 20 ಓವರ್‌ಗಳಲ್ಲಿ 129/8 (ಶಾನ್ ಮಸೂದ್ 44; ಸಿಕಂದರ್ ರಜಾ 3/25, ಬ್ರಾಡ್ ಇವಾನ್ಸ್ ಆಯ್ಕೆ 2/25).

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments