
ಸಿಡ್ನಿ: ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಆಸ್ಟ್ರೇಲಿಯಾಗೆ ಬಂದಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಧನುಷ್ಕಾ ಗುಣತಿಲಕ ಅತ್ಯಾಚಾರ ಆರೋಪದಲ್ಲಿ ಭಾನುವಾರ ಬಂಧನಕ್ಕೊಳಗಾಗಿದ್ದಾರೆ. ಗುಣತಿಲಕ ಮೇಲೆ ಒಪ್ಪಿಗೆಯಿಲ್ಲದೆ ನಾಲ್ಕು ಬಾರಿ ಲೈಂಗಿಕ ಸಂಭೋಗ ನಡೆಸಿರುವ ಆರೋಪ ಕೇಳಿಬಂದಿದೆ. ಶ್ರೀಲಂಕಾ ತಂಡ ಟಿ-20 ವಿಶ್ವಕಪ್ ನಿಂದ ಹೊರಬಿದ್ದಿದ್ದು ಅವರ ತಂಡ ಆರೋಪಕ್ಕೆ ಗುರಿಯಾಗಿರುವ ಗುಣತಿಲಕ ಅವರನ್ನು ಅಲ್ಲಿಯೇ ಬಿಟ್ಟು ಸ್ವದೇಶಕ್ಕೆ ವಾಪಸಾಗಿದೆ.
ವಾರದ ಹಿಂದೆ ಸಿಡ್ನಿಯಲ್ಲಿ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ಸುಮಾರು 1 ಗಂಟೆ ಸುಮಾರಿನಲ್ಲಿ ದನುಷ್ಕಾ ಗುಣತಿಲಕ ತಂಗಿದ್ದ ಹೋಟೆಲ್ ನಿಂದ ಅವರನ್ನು ಬಂಧಿಸಲಾಗಿದೆ. ರೋಸ್ ಬೇಯಲ್ಲಿರುವ ಮನೆಯಲ್ಲಿ 29 ವರ್ಷದ ಆಸೀಸ್ ಮಹಿಳೆ ಲೈಂಗಿಕ ದೌರ್ಜನ್ಯಕ್ಕೊಳಗಾದ ವರದಿಗಳ ನಂತರ ಅಲ್ಲಿನ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದರು.
ಸಂತ್ರಸ್ತ ಮಹಿಳೆಯು ಆನ್ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಗುಣತಿಲಕ ಅವರೊಂದಿಗೆ ಹಲವು ದಿನಗಳವರೆಗೆ ಚಾಟಿಂಗ್ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ನಂತರ ಇವರಿಬ್ಬರೂ ಬುಧವಾರ ಭೇಟಿಯಾಗಿದ್ದು, ಆ ಸಂದರ್ಭ ಧನುಷ್ಕಾ ಗುಣತಿಲಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































