
ಬಂಟ್ವಾಳ: ಯಾರನ್ನೋ ಕೊಲೆ ಮಾಡಿ ಸುತ್ತು ಹಾಕಲಾಗಿದೆ ಎಂಬ ಗಾಳಿ ಸುದ್ದಿ ಹಿಂದೆ ಬಿದ್ದ ಪೊಲೀಸರಿಗೆ ಶಾಕ್ ಆಗುವಂತಹ ವಿಚಾರ ತಿಳಿದು ಬಂದಿದೆ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಯುವಕನೋರ್ವನನ್ನು ಅದೇ ಗ್ರಾಮದ ನಿವಾಸಿ ಅನೈತಿಕ ಚಟುವಟಿಕೆಗಾಗಿ ಮುಳೂರುಪದವು ಗುಡ್ಡಕ್ಕೆ ಕರೆದುಕೊಂಡು ಬಂದು ಸುಟ್ಟು ಹಾಕಿ ಹೊಂಡಕ್ಕೆ ಎಸೆದ ಘಟನೆ ಈ ಮೂಲಕ ತಡವಾಗಿ ಬೆಳಕಿಗೆ ಬಂದಿದೆ.
ವಿಟ್ಲ ಬೋಳಂತೂರು ಗ್ರಾಮ ನಿವಾಸಿ ಅಬ್ದುಲ್ ಸಮದ್ ಕೊಲೆಯಾದ ಯುವಕ. ಅದೇ ಗ್ರಾಮದ ನಿವಾಸಿ ರಿಕ್ಷಾ ಚಾಲಕ ಅಬ್ದುಲ್ ರಹಿಮಾನ್ ಎಂಬಾತ ಕೊಲೆ ಮಾಡಿ ಗುಡ್ಡದಲ್ಲಿರುವ ಗುಂಡಿಗೆ ಎಸೆದಿದ್ದಾನೆ. ಪೊಲೀಸರು ಯುವಕನ ಮೃತದೇಹವನ್ನು ಹೊರ ತೆಗೆಯಲು ಮಂಗಳವಾರ ಕಾರ್ಯಾಚರಣೆ ನಡೆಸಿದ್ದು, ಸಂಜೆಯ ಬಳಿಕ ಹುಡುಕಾಟದ ಕಾರ್ಯಾಚರಣೆ ನಾಳೆಗೆ ಮುಂದೂಡಿದ್ದಾರೆ.
ಸಮದ್ ಭಾನುವಾರದಿಂದ ಕಾಣೆಯಾಗಿರುವ ಕುರಿತು ಆತನ ಮನೆಯವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪೊಲೀಸರು ತನಿಖೆ ನಡೆಸಿದಾಗ ಆತನಿಗೆ ಆರೋಪಿ ರಹಿಮಾನ್ ಜತೆ ಸಂಪರ್ಕ ಇರುವ ಸುಳಿವು ಪತ್ತೆಯಾಗಿ ಇಡೀ ಪ್ರಕರಣ ಬಹಿರಂಗವಾಗುತ್ತದೆ.
ಬಂಟ್ವಾಳ ಗ್ರಾಮಾಂತರ ಹಾಗೂ ವಿಟ್ಲ ಪೊಲೀಸರು ಪ್ರಕರಣ ತನಿಖೆ ನಡೆಸುತ್ತಿದ್ದಾರೆ. ಬುಧವಾರ ಮತ್ತೆ ಶವ ಹುಡುಕಾಟದ ಕಾರ್ಯಾಚರಣೆ ನಡೆಯಲಿದೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































