
ಮಂಗಳೂರು: ಮಂಗಳೂರಿನಲ್ಲಿ ದೊಡ್ಡ ಡ್ರಗ್ಸ್ ಜಾಲವನ್ನು ಭೆಸ್ಧಿಸಿರುವ ನಗರ ಪೊಲೀಸರು ಡ್ರಗ್ಸ್ ಸರಬರಾಜಿನಲ್ಲಿ ಭಾಗಿಯಾಗಿದ್ದ ಒಟ್ಟು 10 ಮಂದಿಯನ್ನು ಬಂಧಿಸಿದ್ದಾರೆ. ಅವರಲ್ಲಿ 4 ಮಂದಿ ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿನಿಯರೂ ಸೇರಿದ್ದಾರೆ.
ಡ್ರಗ್ ಡೀಲರ್ ನೀಲ್ ಕಿಶೋರಿಲಾಲ್ ರಾಮ್ ಜೀ ಶಾ (38), ಎನ್ಆರ್ ಐ ಬಿಡಿಎಸ್ ವಿದ್ಯಾರ್ಥಿ ಡಾ. ಸಮೀರ್ (32), ಡಾ. ಮನಿಮಾರನ್ ಮುತ್ತು (28) , ಡಾ. ನಾದಿಯಾ ಸಿರಾಜ್ (24) ಡಾ. ವರ್ಷಿಣಿ ಪ್ರಾಥಿ (26) ಡಾ. ರಿಯಾ ಚಡ್ಡಾ (22) ಡಾ ಭಾನು ದಹಿಯಾ (27) ಡಾ. ಕ್ಷಿತಿಜ್ ಗುಪ್ತ (25) ಇರಾ ಬಸಿನ್ (23) ಹಾಗೂ ಮುಹಮ್ಮದ್ ರೌಫ್ ಬಂಧಿತ ವ್ಯಕ್ತಿಗಳು.
ಈ ಎಲ್ಲ ಆರೋಪಿಗಳು ನಗರದ ಬಂಟ್ಸ್ ಹೊಟೆಲ್ ಬಳಿ ಇದ್ದ ಅಪಾರ್ಟ್ಮೆಂಟ್ ನಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಜನರಿಗೆ ಗಾಂಜಾ ಮಾರಾಟ ಮಾಡ್ತುತಿದ್ದರು ಎಂದು ಮಂಗಳೂರಿನ ಸಿಸಿಬಿ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ಎಂ ತಿಳಿಸಿದ್ದಾರೆ.
ಧಾಳಿಯ ವೇಳೆ ನೀಲ್ ಕಿಶೋರಿಲಾಲ್ ರಾಮ್ ಜಿ ಷಾ ಎಂಬ ವ್ಯಕ್ತಿಯನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಯಿತು. ದಾಳಿ ವೇಳೆ ಪೊಲೀಸರು 50,000 ರೂಪಾಯಿ ಮೌಲ್ಯದ 2 ಕೆ.ಜಿ ಗಾಂಜಾ, 2 ಮೊಬೈಲ್ ಫೋನ್, 7,000 ಮೌಲ್ಯದ ನಗದು, ವಿವಿಧ ಡಿಜಿಟಲ್ ಉಪಕರಣಗಳು, ಟಾಯ್ ಗನ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇತರ ಆರೋಪಿಗಳನ್ನು ಬೇರೆ ಬೇರೆ ಹೊಟೆಲ್. ಪಿಜಿಗಳು, ಖಾಸಗಿ ನಿವಾಸಗಳಿಂದ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































