HomeCoastalಬಂಟ್ವಾಳ: ನೇತ್ರಾವತಿ ನದಿಯಲ್ಲಿ ಯುವಕನ ಮೃತ ದೇಹ ಪತ್ತೆ, ಸಾವಿನ ಬಗ್ಗೆ ಅನುಮಾನ

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಯುವಕನ ಮೃತ ದೇಹ ಪತ್ತೆ, ಸಾವಿನ ಬಗ್ಗೆ ಅನುಮಾನ

ಬಂಟ್ವಾಳ: ಬಂಟ್ವಾಳದ ನೇತ್ರಾವತಿ ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಗುರುವಾರ ಬೆಳಿಗ್ಗೆ ಜರಗಿದೆ.

ಮೃತರು ಬಂಟ್ವಾಳ ತಾಲೂಕಿನ ಸಜೀಪ ನಿವಾಸಿ ರಾಜೇಶ್‌ ಪೂಜಾರಿ ಸ್ಥಾನದ ಮನೆ ಎಂದು ತಿಳಿದು ಬಂದಿದೆ. ಇದೊಂದು ಆತ್ಮಹತ್ಯೆಯ ಅಥವಾ ವಾಹನ ಅಪಘಾತವಾಗಿ ನದಿಗೆ ಬಿದ್ದಿರುವುದ ಎಂಬ ಗೊಂದಲ ವ್ಯಕ್ತವಾಗಿದೆ.

ಬಂಟ್ವಾಳದ ಪಾಣೆಮಂಗಳೂರು ಕಿರಿದಾದ ಹಳೆ ಸೇತುವೆಯಲ್ಲಿ ದ್ವಿ ಚಕ್ರ ವಾಹನವೊಂದು ಪತ್ತೆಯಾದ ಹಿನ್ನೆಲೆ ಸೇತುವೆಯಲ್ಲಿ ಸಂಚರಿಸುವ ವಾಹನ ಸವಾರರು ಸಂಶಯಗೊಂಡು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಯಾರೋ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ತಿಳಿಯಲಾಗಿತ್ತು. ಹಾಗಾಗಿ ಬಂಟ್ವಾಳ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರ ತಂಡ ಕಾರ್ಯಚರಣೆಯಲ್ಲಿ ನಡೆಸಿದಾಗ ರಾಜೇಶ್ ಪೂಜಾರಿಯ‌ ಮೃತದೇಹ ಪತ್ತೆಯಾಗಿದೆ.

ರಾಜೇಶ್ ಪೂಜಾರಿ ಹಿಂದೂ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಇದೀಗ ಸಾವಿನ ಕಾರಣ ಸ್ಪಷ್ಟವಾಗದ ಹಿನ್ನಲೆಯಲ್ಲಿ ಸಾವಿನ ಬಗ್ಗೆ ಜನರಲ್ಲಿ ಸಂಶಯ ವ್ಯಕ್ತವಾಗಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments