HomeCoastalಕಾಟಿಪಳ್ಳ: ಫಾಝಿಲ್ ಸೋದರನಿಂದ ಹಿಂದೂ ಯುವಕನ ಹತ್ಯಾ ಯತ್ನ, ಪ್ರತಿಕಾರ ಶಂಕೆ

ಕಾಟಿಪಳ್ಳ: ಫಾಝಿಲ್ ಸೋದರನಿಂದ ಹಿಂದೂ ಯುವಕನ ಹತ್ಯಾ ಯತ್ನ, ಪ್ರತಿಕಾರ ಶಂಕೆ

ಸುರತ್ಕಲ್: ಇಲ್ಲಿನ ಕಾಟಿಪಳ್ಳ ಕೈಕಂಬದಲ್ಲಿ ಹಿಂದೂ ಯುವಕನ ಮೇಲೆ ಕಾರು ಹತ್ತಿಸಿ ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು ಇತ್ತೀಚೆಗೆ ಸುರತ್ಕಲ್ ನಲ್ಲಿ ಹತ್ಯೆಗೀಡಾದ ಫಾಜಿಲ್ ನ ಸಹೋದರ ಆದಿಲ್ ಮಂಗಲ್ ಪೇಟೆ ಪ್ರಮುಖ ಆರೋಪಿಯಾಗಿದ್ದಾನೆ. ಈತ ಕಾಟಿಪಳ್ಳ ಗಣಪತಿ ದೇವಸ್ಥಾನದ ಹತ್ತಿರ ತನ್ನ ಮಾರುತಿ ಸ್ವಿಫ್ಟ್ ಕಾರು ಅನ್ನು ವೇಗವಾಗಿ ಚಲಾಯಿಸಿ ಬಂದು ಕೆಲಸ ಮುಗಿಸಿ ತನ್ನ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ಹಿಂದೂ ಯುವಕನ ಕೊಲೆಗೆ ಯತ್ನಿಸಿದ್ದಾನೆ. ಇದು ಫಾಝಿಲ್ ಕೊಲೆಗೆ ಪ್ರತಿಕಾರ ತೆಗೆದುಕೊಳ್ಳಲು ನಡೆಸಿದ ಯತ್ನ ಎಂದು ಶಂಕಿಸಲಾಗಿದೆ.

ಬೈಕ್ ಸವಾರ ಹಿಂದೂ ಯುವಕನಿಗೆ ಗಾಯವಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಉದ್ದೇಶಪೂರ್ವಕವಾಗಿ ಬೈಕ್ ಗೆ ಡಿಕ್ಕಿ ಹೊಡಿದುರುವ ಫಾಜಿಲ್ ಸಹೋದರ ಆದಿಲ್ ಮಂಗಲ್ ಪೇಟೆ, ಅಲ್ಲಿನ ಕೈಕಂಬ ಸರ್ಕಲ್ ಬಳಿ ಜೋರಾಗಿ ಅರಚಾಡುತ್ತಾ ಎಲ್ಲರಿಗೂ ಬಾಯಿಗೆ ಬಂದಂತೆ ಬೈದಿದ್ದಾನೆ. ಅದೇ ಸಮಯಕ್ಕೆ ಸ್ಥಳದಲ್ಲಿ 100ರಿಂದ 150 ಜನ ಮುಸ್ಲಿಂ ಯುವಕರು ಸೇರಿದ್ದು ಇದು ಉದ್ಧೇಶಪೂರ್ವಕ ಹಾಗು ಪೂರ್ವನಿಯೋಜಿತ ಕೊಲೆ ಯತ್ನ ಎಂಬುದಕ್ಕೆ ಪುಷ್ಟಿ ನೀಡುವಂತಿದೆ.

ಸುರತ್ಕಲ್ಲಿನಲ್ಲಿ ಫಾಜಿಲ್ ಹತ್ಯೆಯಾದ ಬಳಿಕ ಆದಿಲ್ ಕಾಟಿಪಳ್ಳದಲ್ಲಿ ಪುಂಡ ಮುಸ್ಲಿಂ ಯುವಕರ ಗುಂಪು ಕಟ್ಟಿ ಸುತ್ತುತ್ತಿದ್ದ ಎಂಬ ಮಾಹಿತಿಯೂ ಸ್ಥಳೀಯವಾಗಿ ಪ್ರಚಲಿತದಲ್ಲಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments