HomeKarnatakaಮಂಗಳೂರಿಗೆ ನಾಳೆ ಅಮಿತ್ ಶಾ ಭೇಟಿ: ಭದ್ರತಾ ಕಾರಣಕ್ಕೆ ರೋಡ್ ಶೋ ರದ್ದು

ಮಂಗಳೂರಿಗೆ ನಾಳೆ ಅಮಿತ್ ಶಾ ಭೇಟಿ: ಭದ್ರತಾ ಕಾರಣಕ್ಕೆ ರೋಡ್ ಶೋ ರದ್ದು

ಮಂಗಳೂರು: ಪುತ್ತೂರು ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಲುವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಮಂಗಳೂರಿಗೆ ಆಗಮಿಸುತ್ತಿದ್ದು, ಭದ್ರತಾ ಕಾರಣದಿಂದ ಈ ಹಿಂದೆ ಉದ್ದೇಶಿಸಲಾಗಿದ್ದ ರೋಡ್ ಶೋ ರದ್ದುಗೊಳಿಸಲಾಗಿದೆ ಎಂದು ಭಾರತೀಯ ಜನತಾ ಪಕ್ಷ ಜಿಲ್ಲಾ ಘಟಕ ತಿಳಿಸಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಮಂಗಳೂರುವರೆಗೆ ರೋಡ್ ಷೋ ನಡೆಸಲು ಉದೇಶಿಸಲಾಗಿತ್ತು.

ಭದ್ರತಾ ಕಾರಣದಿಂದ ಕೇಂದ್ರ ಗೃಹ ಸಚಿವರ ರೋಡ್ ಶೋ ವನ್ನು ರದ್ದುಪಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ಮಂಗಳೂರಿನ ಕೆಂಜಾರು ಶ್ರೀದೇವಿ ಕಾಲೇಜಿನಲ್ಲಿ ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಶಾ ಭಾಗವಹಿಸಲಿದ್ದಾರೆ.

ಶನಿವಾರ ಸಂಜೆ ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಮಾರಂಭವನ್ನು ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಷಾ ಉದ್ಘಾಟಿಸಲಿದ್ದಾರೆ. ಹನುಮಗಿರಿಯಲ್ಲಿ ಧರ್ಮಶ್ರೀ ಪ್ರತಿಷ್ಠಾನ ನಿರ್ಮಿಸಿರುವ ಭಾರತ ಮಾತಾ ಮಂದಿರವನ್ನು ಅಮಿತ್ ಶಾ ಉದ್ಘಾಟಿಸಲಿದ್ದು, ಬಳಿಕ ಹನುಮಗಿರಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments