HomeCoastalಕೊಂಚಾಡಿ: ಮಂದಾರಬೈಲು ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

ಕೊಂಚಾಡಿ: ಮಂದಾರಬೈಲು ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

ಮಂಗಳೂರು: ನಗರದ ಕೊಂಚಾಡಿ ಮಂದಾರಬೈಲು ಶ್ರೀ ದುರ್ಗಾ ಪರಮೇಶ್ವರಿ ವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ಶ್ರೀನಿವಾಸ ಕಲ್ಯಾಣೋತ್ಸವವು ವಿದ್ವಾನ್ ಡಾ ಬಿ. ಗೋಪಾಲ ಆಚಾರ್ ಉಡುಪಿ ಇವರ ನೇತೃತ್ವದಲ್ಲಿ ಅದ್ದೂರಿಯಾಗಿ ಜರಗಿತು. ಮೆರವಣಿಗೆಯಲ್ಲಿ ದೇವರ ದಿಬ್ಬಣ ಬಂದ ಬಳಿಕ ಶ್ರೀನಿವಾಸ ದೇವರ ಕಲ್ಯಾಣೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಥಾ ರೂಪ ಗಾಯನ ಮತ್ತು ರೂಪಕದ ಮುಖೇನ ವೈಶಿಷ್ಟ್ಯಪೂರ್ಣವಾಗಿ ಸಂಪನ್ನಗೊಂಡಿತು.

ಈ ಸಂದರ್ಭ ವೇದ ಮೂರ್ತಿ ವಾಸುದೇವ ಅಸ್ರಣ್ಣ, ಬ್ರಹ್ಮಶ್ರೀ ವಿಠ್ಠಲದಾಸ್ ತಂತ್ರಿ, ಪ್ರದೀಪ್ ಕಲ್ಕೂರ, ಶ್ರೀ ಗಿರಿಪ್ರಕಾಶ್ ತಂತ್ರಿ, ಶ್ರೀಮತಿ ರಂಜಿನಿ ಕೋಟ್ಯಾನ್, ವಿಹಿಂಪ ಪ್ರಮುಖರಾದ ಶ್ರೀ ಎಂ ಬಿ ಪುರಾಣಿಕ್, ಶ್ರೀ ಶರಣ್ ಪಂಪ್ ವೆಲ್ , ಶ್ರೀಗೋಪಾಲ್ ಕುತ್ತಾರ್, ಶ್ರೀ ಪ್ರಶಾಂತ್ ಉಬರಂಗಳ, ಶ್ರೀ ಭುಜಂಗ ಕುಲಾಲ್, ಪ್ರಕಾಶ್ ಪಂಡಿತ್ , ದ. ಕ. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಸುಚರಿತ ಶೆಟ್ಟಿ, ಶ್ರೀ ಸುಧಾಕರ್ ರಾವ್ ಪೇಜಾವರ, ಶ್ರೀಮತಿ ಚೇತನಾ ರಮೇಶ್ , ಶ್ರೀ ದೀಪಕ್ ಮರೋಳಿ , ಶ್ರೀ ಅಜಿತ್ ಶೆಟ್ಟಿ, ಶ್ರೀ ಭವಾನಿ ಶಂಕರ್, ಶ್ರೀ ವಿಜಯ್ ,ಶ್ರೀ ದುರ್ಗಾದಾಸ್ ಇರ್ವತ್ರಾಯ, ಶ್ರೀ ಲಕ್ಷ್ಮಣ್ ದೇವಾಡಿಗ, ಶ್ರೀ ಗುರುಪ್ರಸಾದ್ ಕಡಂಬಾರ್, ಶ್ರೀ ಪ್ರಸನ್ನ ರಾವ್, ಶ್ರೀ ರಾಘವೇಂದ್ರ ಉಡುಪ, ಕೊರಗಪ್ಪ ಶೆಟ್ಟಿ. ಮಣಿಪಾಲ ಬಳಗದ ಆನಂದ್ ಕೆ, ಸಂಘಟಕ ಕಾ.ವೀ. ಕೃಷ್ಣದಾಸ್ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments